Connect with us


      




ದೇಶ

ಶಿವಸೇನೆ ಕೊನೆಯವರೆಗೂ ಹೋರಾಡಲಿದೆ: ಸಂಜಯ್ ರಾವತ್

Vanitha Jain

Published

on

ಮುಂಬೈ: ಜೂನ್ 25 (ಯು.ಎನ್.ಐ.) ಶಿವಸೇನೆ ಬಂಡಾಯಗಾರ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ನಡುವಿನ ಸಮರ ಉಲ್ಬಣಗೊಳ್ಳುತ್ತಿದ್ದಂತೆ ಹಿರಿಯ ನಾಯಕ ಸಂಜಯ್ ರಾವತ್ ಅವರು ಶಿವಸೈನಿಕರನ್ನು ಬೀದಿಗಿಳಿಸುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಿಲ್ಲ ಮತ್ತು ಶಿವಸೇನೆ ಕೊನೆಯವರೆಗೂ ಹೋರಾಡಲಿದೆ ಎಂದು ಸಂಜಯ್ ರಾವತ್ ಹೇಳಿದರು.

ಇದು ಶಿವಸೈನಿಕರ ಕೋಪ. ಒಮ್ಮೆ ಹೊತ್ತಿಸಿದ ಬೆಂಕಿ ಆರುವುದಿಲ್ಲ. ನಾವು ಕೊನೆವರೆಗೂ ಹೋರಾಡುತ್ತೇವೆ ಎಂದು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ವಿಧ್ವಂಸಕ ಕೃತ್ಯಗಳು ಹಾಗೂ ಬಂಡಾಯ ಸೇನೆಯ ಶಾಸಕರ ಕಚೇರಿಯನ್ನು ಧ್ವಂಸ ಘಟನೆ ವರದಿಯಾಗುತ್ತಿದ್ದಂತೆ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಅಸ್ಸಾಂನ ಗುವಾಹಟಿಯ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಪಕ್ಷದ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಪುಣೆ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಶನಿವಾರ ಧ್ವಂಸಗೊಳಿಸಿದ್ದಾರೆ.

Share