Connect with us


      
ವಿದೇಶ

ಬ್ರಿಟನ್‌ ಮಾಜಿ ಪ್ರಧಾನಿ ಬ್ಲೇರ್‌ಗೆ ‘ನೈಟ್‌ ಹುಡ್’ ಗೌರವ

UNI Kannada

Published

on

ಲಂಡನ್, ಜ 2(ಯುಎನ್‌ ಐ) ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರಿಗೆ ಬ್ರಿಟನ್ ರಾಣಿ ಎಲಿಜಬೆತ್ ನೈಟ್ ಹುಡ್ ಸ್ಥಾನಮಾನ ನೀಡಿ ಗೌರವಿಸಿದ್ದಾರೆ. ಇನ್ನೂ ಬ್ಲೇರ್‌ .. ʼಆರ್ಡರ್‌ ಆಫ್‌ ಗಾರ್ಡೆರ್‌ ʼ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ನಿರಂತರವಾಗಿ ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ಬ್ರಿಟನ್‌ ಸರ್ಕಾರ ನೈಟ್ ಹುಡ್ ಎಂಬ ನೀಡಿ ಗೌರವಿಸುತ್ತಿದೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಲಹೆಯ ಹೊರತಾಗಿಯೂ ರಾಣಿ ಈ ನಿರ್ಧಾರ ತೆಗೆದುಕೊಂಡಿರುವುದು ವಿಶೇಷ.

ಟೋನಿ ಬ್ಲೇರ್ ಅವರನ್ನು ಈಗ ಪ್ರೀತಿಯಿಂದ “ಸರ್ ಟೋನಿ” ಎಂದು ಕರೆಯಲಾಗುತ್ತದೆ.

68 ವರ್ಷದ ಟೋನಿ ಬ್ಲೇರ್ 1997 ರಿಂದ ಹತ್ತು ವರ್ಷಗಳ ಕಾಲ ಬ್ರಿಟನ್ ಪ್ರಧಾನಿಯಾಗಿದ್ದರು. ಬ್ರಿಟಿಷ್ ಸಚಿವೆ ಹಾಗೂ ಕಪ್ಪು ಮಹಿಳೆ ಬ್ಯಾರನೆಸ್ ವ್ಯಾಲೆರಿ ಅಮೋಸ್ (67) ಅವರಿಗೂ ಸಹ ನೈಟ್ ಹುಡ್‌ ನೀಡಲಾಗಿದೆ. ಕೌಟುಂಬಿಕ ಹಿಂಸಾಚಾರ, ಲೈಂಗಿಕ ಕಿರುಕುಳದ ಸಂಬಂಧ ಅಂತರರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳ್ಲಿ ಕೆಲಸ ಮಾಡಲು ರಾಣಿ ಎಲಿಜಬೆತ್ ತನ್ನ ಸೊಸೆ ಕ್ಯಾಮಿಲ್ಲಾ ಅವರನ್ನು “ರಾಯಲ್ ಕಂಪ್ಯಾನಿಯನ್” ಆಗಿ ನೇಮಿಸಲು ನಿರ್ಧರಿಸಿದ್ದಾರೆ.

Share