Published
5 months agoon
By
Vanitha Jainಲಂಡನ್, ಡಿಸೆಂಬರ್ 14 (ಯು.ಎನ್.ಐ) ಪಲಾಯನಗೈದಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದರ ಕುರಿತಾದ ಮನವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಯುಕೆ ಹೈಕೋರ್ಟ್ ಮಂಗಳವಾರ ಆರಂಭಿಸಿದೆ.
ಈ ಆಗಸ್ಟ್ ನ ಆರಂಭದಲ್ಲಿ, ಭಾರತಕ್ಕೆ ಹಿಂತಿರುಗುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ ಮತ್ತು ಆತ್ಮಹತ್ಯೆ ಸಂಭವ ಎದುರಾಗಬಹುದು ಎಂಬ ಆಧಾರದ ಮೇಲೆ ನೀರವ್ ಮೋದಿ ಅವರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವುದರ ಬಗ್ಗೆ ಮನವಿ ಸಲ್ಲಿಸಲು ಅನುಮತಿ ನೀಡಲಾಯಿತು.
ಮೋದಿ ವಕೀಲರು ತಮ್ಮ ಕಕ್ಷಿದಾರರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಅವರನ್ನು ಬಂಧಿಸಿದರೆ ಅವರಿಗೆ ಸಾಕಷ್ಟು ವೈದ್ಯಕೀಯ ಸೇವೆ ಸಿಗುವುದಿಲ್ಲ ಎಂದು ವಾದಿಸಿದ್ದರು.
ಮಾರ್ಚ್ 2019ರಲ್ಲಿ ಲಂಡನ್ನಲ್ಲಿ ಬಂಧಿಸಿದ ನಂತರ ಮತ್ತು ಕೋವಿಡ್ -19 ವೇಳೆ ಜೈಲುಗಳ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿದ ನಂತರ ದಕ್ಷಿಣ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿನ ಸೆರೆವಾಸದಲ್ಲಿ ಅವರ ಮಾನಸಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.
ನೀರವ್ ಮೋದಿ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದಲ್ಲಿದ್ದಾರೆ ಎಂಬುದಕ್ಕೆ ಪುರಾವೆ ನೀಡಲು ಹಲವಾರು ವೈದ್ಯಕೀಯ ತಜ್ಞರನ್ನು ಪರಿಚಯಿಸಿದ್ದರು.
ಒಂದು ಕಾಲದಲ್ಲಿ ಹಾಲಿವುಡ್ ಮತ್ತು ಬಾಲಿವುಡ್ನ ಕೆಲವು ದೊಡ್ಡ ತಾರೆಯರ ಆಭರಣ ವ್ಯಾಪಾರಿಯಾಗಿರುವ ಮೋದಿ, ಡಮ್ಮಿ ಕಾಪೆರ್Çರೇಷನ್ಗಳು ಮತ್ತು ನಿರ್ದೇಶಕರನ್ನು ಒಳಗೊಂಡ ಹಗರಣದ ಮೂಲಕ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಯುಎಸ್ಡಿ 2 ಶತಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಭಾರತ ಸರ್ಕಾರವು ಸಾಕ್ಷಿ ಬೆದರಿಕೆ ಮತ್ತು ಸಾಕ್ಷ್ಯ ನಾಶದ ಆರೋಪವನ್ನು ನೀರವ್ ಮೋದಿ ಮೇಲೆ ಹೊರಿಸಿದೆ.
ಮಾರ್ಚ್ 2019ರಲ್ಲಿ ಬಂಧಿಸಿದಾಗಿನಿಂದ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿ ಇರಿಸಲಾಗಿದೆ.
ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡ ಹಿರಿಮೆ ಸಾರಿದ ಸಂಸದ
ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ
ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು
ಪ್ರಪಂಚದಲ್ಲಿ ಎದುರಾಗಿದೆ ಮಂಕಿಪಾಕ್ಸ್ ಭೀತಿ; ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?
ಭಾರತದಲ್ಲಿ ಯುವತಿಯನ್ನು ವೇಶ್ಯಾಗೃಹಕ್ಕೆ ಮಾರಾಟಮಾಡಿದ ಬಾಂಗ್ಲಾ ದಂಪತಿಗೆ ಮರಣದಂಡನೆ
ಕಾನ್ ಚಲನಚಿತ್ರೋತ್ಸವ; ರೆಡ್ ಕಾರ್ಪೆಟ್ ಮೇಲೆ ಸಚಿವ ಅನುರಾಗ್ ಠಾಕೂರ್ ಜೊತೆ ಸಿನಿ ಸ್ಟಾರ್ಸ್