Connect with us


      




ವಿದೇಶ

ಅಮೆರಿಕಾ- ರಷ್ಯಾ ನಡುವೆ ರಾಜತಾಂತ್ರಿಕ ಜಟಾಪಟಿ

Published

on

ವಾಷಿಂಗ್ಟನ್, ಜ ೧೩(ಯು ಎನ್ ಐ) ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ರಷ್ಯಾ ನಡುವಣ ರಾಜತಾಂತ್ರಿಕ ಜಟಾಪಟಿ ಮುಂದುವರೆದಿದೆ.
ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ವೆಂಡಿ ಶೇರ್‌ಮನ್, ರಾಜತಾಂತ್ರಿಕ ಅಥವಾ ಸಂಘರ್ಷ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವಂತೆ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಸಂಬಂಧ ಅಮೆರಿಕಾ ಹಾಗೂ ರಷ್ಯಾ ಉಂಟಾಗಿರುವ ಉದ್ವಿಗ್ನತೆ ಶಮನಗೊಳಿಸುವ ಭಾಗವಾಗಿ ಈ ವಾರ ನಡೆಸಲಾದ ೩ ರಾಜತಾಂತ್ರಿಕ ಸಭೆಗಳ ಪೈ ಕಿ ಒಂದಾದ ನ್ಯಾಟೊ ಹಾಗೂ ರಷ್ಯಾದೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ರಷ್ಯಾದ ಉಪ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಗ್ರುಶ್ಕೋ, ರಷ್ಯಾದ ಬೇಡಿಕೆಗಳನ್ನು ನ್ಯಾಟೊ ಆಯ್ಕೆ ಮಾಡಲು ಸಾಧ್ಯವಿಲ್ಲ. ಉಕ್ರೇನ್, ನ್ಯಾಟೊ ಒಕ್ಕೂಟ ಎಂದಿಗೂ ಸೇರಬಾರದು ಎಂಬುದು ನಮ್ಮ ಬೇಡಿಕೆಯ ಪಟ್ಟಿಯಲ್ಲಿದೆ ಎಂದು ಹೇಳಿದ್ದಾರೆ.
ಉಕ್ರೇನ್, ನ್ಯಾಟೊ ಸೇರ್ಪಡೆಗೆ ಅಮೆರಿಕ ಹಾಗೂ ಇತರ ನ್ಯಾಟೊ ಸದಸ್ಯ ರಾಷ್ಟ್ರಗಳು ಸಮ್ಮತಿಸಿಲ್ಲ ಎಂದು ವೆಂಡಿ ಶೇರ್‌ಮನ್ ಸ್ಪಷ್ಟಪಡಿಸಿದ್ದಾರೆ.
ಸೇನಾ ಮೈತ್ರಿಕೂಟ ತೆರೆದ ನೀತಿಯಾಗಿದ್ದು, ಉಕ್ರೇನ್ ಸಂವಿಧಾನದ ಭಾಗವಾಗಿ ನ್ಯಾಟೊ ಸೇರುವ ಗುರಿ ಹೊಂದಲಾಗಿದೆ. ಸುಮಾರು ೧ ಲಕ್ಷ ರಷ್ಯಾ ಸೈನಿಕರು ಉಕ್ರೇನ್ ಗಡಿ ಬಳಿ ಜಮಾಯಿಸಿದ್ದು ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಭೀತಿ ಉಂಟುಮಾಡಿದೆ.

ವಿದೇಶ

ಅಫ್ಘಾನಿಸ್ತಾನ ಬಾಂಬ್ ಸ್ಫೋಟ: 7 ಮಂದಿ ಸಾವು

Published

on

ಹೆರಾತ್: ಜನೆವರಿ 23 (ಯು.ಎನ್.ಐ.) ಅಫ್ಘಾನಿಸ್ತಾನದ ಪಶ್ಚಿಮ ನಗರವಾಗಿರುವ ಹೆರಾತ್‌ನಲ್ಲಿ ಮಿನಿ ವ್ಯಾನ್‌ ಒಳಗೆ ಇಟ್ಟಿದ್ದ ಬಾಂಬ್ ಸ್ಫೋಟಗೊಂಡು 7 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದು, ದಾಳಿಯಲ್ಲಿ 10 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಕಮಾಂಡರ್ ಮೌಲಾವಿ ಅನ್ಸಾರಿ ಹೇಳಿದ್ದಾರೆ. ಆದರೆ ಸ್ಫೋಟದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಸೀಕ್ರೆಟ್ ಇಲಾಖೆಯ ವಕ್ತಾರ ಸಬಿತ್ ಹಾರ್ವೆ ನೀಡಿರುವ ಮಾಹಿತಿ ಪ್ರಕಾರ, “ಪ್ರಯಾಣಿಕರ ವಾಹನದಲ್ಲಿನ ತೈಲ ಟ್ಯಾಂಕ್ ಮೇಲೆ ಸ್ಫೋಟಕವನ್ನು ಅಳವಡಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ” ಎಂದು ಹೇಳಿದ್ದಾರೆ. ಇನ್ನು ಗಾಯಗೊಂಡ 10 ಮಂದಿಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೆರಾತ್‌ನ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಐಸಿಸ್ ಮತ್ತು ಐಸಿಸ್-ಕೆ ಭಯೋತ್ಪಾದಕರ ಮೇಲೆ ಶಂಕೆ

ಸ್ಫೋಟ ಸಂಭವಿಸಿದ ಹೆರಾತ್ ಪ್ರದೇಶದಲ್ಲಿ ಶಿಯಾ ಹಜಾರಾ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದೆ. ಈ ಸಮುದಾಯವು ಹೆಚ್ಚಾಗಿ ISIS ಮತ್ತು ಇಸ್ಲಾಮಿಕ್ ಸ್ಟೇಟ್ ಇನ್ ಖೊರಾಸನ್ (ISIS-K) ಭಯೋತ್ಪಾದಕರ ದಾಳಿಗೆ ತುತ್ತಾಗುತ್ತಿರುತ್ತಾರೆ. ಇದರಿಂದಾಗಿ ಈ ದಾಳಿಯ ಹಿಂದೆ ಈ ಉಗ್ರ ಸಂಘಟನೆಗಳ ಕೈವಾಡವಿರಬಹುದು ಎಂದು ಊಹಿಸಲಾಗಿದೆ.
ಹೆರಾತ್ ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾಗಿದ್ದು, ಇರಾನ್‌ನ ಗಡಿಯ ಸಮೀಪದಲ್ಲಿದೆ. ಅಫ್ಘಾನಿಸ್ತಾನದ ಇತರ ಪ್ರದೇಶಗಳಿಗೆ ಹೋಲಿಸಿದರೆ ಈ ನಗರವನ್ನು ಸಾಕಷ್ಟು ಶಾಂತವೆಂದು ಪರಿಗಣಿಸಲಾಗಿದೆ. ಆದರೆ, ಈ ದಾಳಿಯಿಂದ ಉಗ್ರರ ಪೈಶಾಚಿಕ ಕೃತ್ಯ ಮತ್ತಷ್ಟು ಅಫ್ಘಾನಿಸ್ತಾನದಲ್ಲಿ ವ್ಯಾಪಿಸತೊಡಗಿದೆ.

ಆರ್ಥಿಕ ಹೊಡೆತದಿಂದ ತತ್ತರಿಸಿದ ತಾಲಿಬಾನ್!

ಪ್ರಪಂಚದಾದ್ಯಂತದ ವಿವಿಧ ದೇಶಗಳು 20 ವರ್ಷಗಳ ಕಾಲದಿಂದ ಅಫ್ಘಾನಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಅಫ್ಘಾನಿಸ್ತಾನ ಆಡಳಿತರೂಢ ಸರ್ಕಾರ ತಾಲಿಬಾನ್ ತತ್ತರಿಸಿ ಹೋಗಿದೆ. 2020ರಲ್ಲಿ ಅಫ್ಘಾನಿಸ್ತಾನದ ಬಜೆಟ್ ಸುಮಾರು 41 ಸಾವಿರ ಕೋಟಿಗಳಷ್ಟಿತ್ತು, ಈಗ ಅದು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಕೇವಲ 3,800 ಕೋಟಿಗಳಾಗಿದೆ.

Continue Reading

ವಿದೇಶ

ಅಧಿಕಾರಕ್ಕಾಗಿ ಟ್ರಂಪ್‌ ಆ ಮಟ್ಟಕ್ಕೆ ಇಳಿದಿದ್ದರೆ ? ಬೆಳಕಿಗೆ ಬಂದ ಆಘಾತಕಾರಿ ವಿಷಯ !

Published

on

By

ಮತ ಯಂತ್ರಗಳ ಸ್ವಾಧೀನಕ್ಕೆ ಟ್ರಂಪ್ ಪತ್ರ !

ವಾಷಿಂಗ್ಟನ್, ಜ 23(ಯುಎನ್‌ ಐ) – ಅಧಿಕಾರ ಹಸ್ತಾಂತರ ಶಾಂತಿಯುತ, ಸುಗಮವಾಗಿ ನಡೆಯುವುದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೇಕಿರಲಿಲ್ಲವೇ ? ಅಧಿಕಾರದಲ್ಲಿ ಮುಂದುವರಿಯಲು ಅವರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರಾ ? ಈ ಅಂಶಗಳನ್ನು ದೃಢಪಡಿಸುವಂತಹ ಪತ್ರವೊಂದು ಬೆಳಕಿಗೆ ಬಂದಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಡೋನಾಲ್ಡ್‌ ಟ್ರಂಪ್ ಬೆಂಬಲಿಗರು ಜನವರಿ 6 ರಂದು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ಸದನ ಸಮಿತಿಗೆ ಈ ಪತ್ರ ಲಭಿಸಿದೆ. ಮತ ಯಂತ್ರಗಳನ್ನು ವಶಪಡಿಸಿಕೊಳ್ಳುವಂತೆ ರಕ್ಷಣಾ ಕಾರ್ಯದರ್ಶಿಗೆ ಈ ಪತ್ರವನ್ನು ಕಳುಹಿಸಲು ಟ್ರಂಪ್‌ ಬಯಸಿದ್ದರು. ಪತ್ರ ಸಿದ್ದಪಡಿಸಿದರಾದರೂ, ಅದನ್ನು ಅಧಿಕೃತವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಆ ಪತ್ರ ರಕ್ಷಣಾ ಸಚಿವಾಲಯಕ್ಕೆ ತಲುಪಿದ್ದರೆ ಚುನಾವಣಾ ಫಲಿತಾಂಶ ದೃಢೀಕರಣ ಇನ್ನೂ 2 ತಿಂಗಳು ವಿಳಂಬವಾಗುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

Continue Reading

ವಿದೇಶ

W H M O ನಿರ್ದೇಶಕ ಸ್ಥಾನಕ್ಕೆ ಮಜು ವರ್ಗೀಸ್‌ ರಾಜೀನಾಮೆ

Published

on

By

ವಾಷಿಂಗ್ಟನ್, ಜ 23(ಯುಎನ್‌ ಐ) ಶ್ವೇತ ಭವನ ಸೇನಾ ಕಚೇರಿಯ ನಿರ್ದೇಶಕ ಸ್ಥಾನಕ್ಕೆ ಭಾರತೀಯ ಮೂಲದ ಮಜು ವರ್ಗೀಸ್ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು ತಮಗೆ ಹೆಮ್ಮೆ ಮೂಡಿಸಿದೆ ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಮಜು ಅವರ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಶ್ವೇತಭವನದ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಮಜು ಅವರು ಈ ಹಿಂದೆ ಒಬಾಮಾ ಆಡಳಿತದಲ್ಲಿಯೂ ಸೇವೆ ಸಲ್ಲಿಸಿದ್ದರು. ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂದು ಶ್ವೇತಭವನ ಇನ್ನೂ ನಿರ್ಧರಿಸಿಲ್ಲ. ಮಜು ಮುಂದಿನ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ವೃತ್ತಿಯಲ್ಲಿ ಮಜು ವಕೀಲರಾಗಿದ್ದು, ಅವರು ಮೂಲತಹಃ ಕೇರಳದವರಾಗಿದ್ದಾರೆ.

Continue Reading
Advertisement
ಅಂಕಣ24 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ44 mins ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ2 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ2 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು2 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ3 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ3 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ3 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ3 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ4 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಟ್ರೆಂಡಿಂಗ್

Share