Connect with us


      
ವಿದೇಶ

ಶೀಘ್ರದಲ್ಲೇ ಕೀವ್ ನಿಂದ ಭಾರತೀಯ ರಾಯಭಾರಿ ಕಚೇರಿ ಕಾರ್ಯ ಪುನಾರಂಭ

Lakshmi Vijaya

Published

on

ಕೀವ್: ಮೇ 13 (ಯು.ಎನ್.ಐ.) ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತೆ ಕೀವ್ ನಲ್ಲಿ ಕಾರ್ಯಾರಂಭ ಮಾಡಲಿದೆ. ರಷ್ಯಾ ಉಕ್ರೇನ್ ಮೇಲೆ ರಕ್ಷಣಾ ಕಾರ್ಯಾಚರಣೆ ಮಾಡಿದ ನಂತರ ಭಾರತೀಯ ರಾಯಭಾರಿ ಕಚೇರಿ ಕೀವ್ ನಲ್ಲಿ ಮುಚ್ಚಲ್ಪಟ್ಟಿತ್ತು.  ಇದೀಗ ಶೀಘ್ರದಲ್ಲೇ ಮತ್ತೆ ಕೀವ್ ನಿಂದ ಕಚೇರಿ ಕೆಲಸಗಳನ್ನ ಕಾರ್ಯಾರಂಭ ಮಾಡಲಿದೆ.

ಇಂದಿನ ಪ್ರಕಟಣೆಯಲ್ಲಿ, ವಿದೇಶಾಂಗ ಸಚಿವಾಲಯವು, “ವಾರ್ಸಾ (ಪೋಲೆಂಡ್) ನಿಂದ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 17 ಮೇ 2022 ರಂದು ಕೀವ್‌ನಿಂದ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ” ಎಂದು ಹೇಳಿದೆ.

ಫೆಬ್ರವರಿ 24 ರ ನಂತರ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡ ನಂತರಉಕ್ರೇನ್ ರಾಜಧಾನಿಯಲ್ಲಿ ರಾಯಭಾರ ಕಚೇರಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಯಿತು.ಮಾರ್ಚ್ 13 ರಂದು ಹೆಚ್ಚಿನ ಭಾರತೀಯ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಿದ ನಂತರ ರಾಯಭಾರ ಕಚೇರಿಯನ್ನು ವಾರ್ಸಾಗೆ ಸ್ಥಳಾಂತರಿಸಲಾಯಿತು.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ರಾಜಕೀಯ ನಾಯಕರು ಇತ್ತೀಚೆಗೆ ಇರ್ಪಿನ್ ಮತ್ತು ಉಕ್ರೇನಿಯನ್ ರಾಜಧಾನಿಯ ಸುತ್ತಮುತ್ತಲಿನ ಇತರ ವಸತಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ,

Share