Published
4 months agoon
By
UNI Kannadaಗಯಾನಾ, ಜ 16(ಯುಎನ್ ಐ) ಅಂಡರ್-19 ವಿಶ್ವಕಪ್ನಲ್ಲಿ ಭಾರತದ ಹುಡುಗರು ಮೊದಲ ಗೆಲುವು ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಯುವ ಭಾರತ ತನ್ನ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಮೊದಲು ಬ್ಯಾಟ್ ಮಾಡಿದ ಯಶ್ ಧೂಲ್ ನಾಯಕತ್ವದ ಭಾರತ ತಂಡ 46.5 ಓವರ್ ಗಳಲ್ಲಿ 232 ರನ್ ಗಳಿಸಿತು. ನಂತರ 233 ರನ್ಗಳ ಅಲ್ಪ ಗುರಿಯೊಂದಿಗೆ ಮೈದಾನಕ್ಕಿಳಿದ ದಕ್ಷಿಣ ಆಫ್ರಿಕಾ 45.4 ಓವರ್ಗಳಲ್ಲಿ ಕೇವಲ 187 ರನ್ಗಳಿಗೆ ಆಲೌಟಾಯಿತು. ಯುವ ಭಾರತ್ 45 ರನ್ಗಳಿಂದ ಅಂಡರ್-19 ವಿಶ್ವಕಪ್ ನಲ್ಲಿ ಮೊದಲ ಗೆಲುವು ಸಾಧಿಸಿದೆ. ಭಾರತದ ಬೌಲರ್ ಗಳ ಪೈಕಿ ವಿಕ್ಕಿ ಓತ್ಸವಲ್ 5, ರಾಜ್ ಭವ 4 ವಿಕೆಟ್ ಪಡೆದು ಸಫಾರಿಗಳ ಸ್ಥೈರ್ಯ ಕುಸಿಯುಂತೆಮಾಡಿದರು.
ಇನ್ನೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರರಾದ ರಘುವಂಶಿ (05), ಹರ್ನೂರ್ ಸಿಂಗ್ (01) ಸಿಂಗಲ್ ಡಿಜಿಟ್ ಗೆ ಸೀಮಿತಗೊಂಡರು. ಆದರೆ, ರಶೀದ್ (31), ನಾಯಕ ಯಶ್ ಧೂಲ್ (82), ಕೌಶಲ್ ತಾಂಬೆ (35) , ನಿಶಾಂತ್ ಸಿಂಧು (27) ಭಾರತದ ಗೆಲುವಿನ ರೂವಾರಿ ಎನಿಸಿದರು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳ ಪೈಕಿ ಡೆವಾಲ್ಡ್ ಬ್ರೆವಿಸ್ ಅರ್ಧಶತಕ (65) ಗಳಿಸಿದರೆ, ನಾಯಕ ಜಾರ್ಜ್ ವ್ಯಾನ್ ಹೀರ್ಡನ್ (36) ರನ್ ಗಳಿಂದ ಪರವಾಗಿಲ್ಲವೆನಿಸಿದರು. ಭಾರತೀಯ ಬೌಲರ್ ಗಳ ದಾಳಿಗೆ ಉಳಿದ ಬ್ಯಾಟ್ಸ್ಮನ್ಗಳು ಕೈಕೊಟ್ಟಿದ್ದರಿಂದ ದಕ್ಷಿಣ ಆಫ್ರಿಕಾ ಕೇವಲ 187 ರನ್ಗಳಿಗೆ ಆಲೌಟ್ ಆಯಿತು. ಐದು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ಕಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಐಪಿಎಲ್ 2022: ಮುಂಬೈ ಇಂಡಿಯನ್ಸ್ ಬೆಂಬಲಿಸಿ ಪ್ರೊಫೈಲ್ ಚಿತ್ರ ಬದಲಿಸಿದ ಆರ್ ಸಿಬಿ
ಥಾಯ್ಲೆಂಡ್ ಓಪನ್: ಚೀನಾ ಆಟಗಾರ್ತಿ ಎದುರು ಪಿ.ವಿ.ಸಿಂಧುಗೆ ಸೋಲು
ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಗೆ 2ನೇ ಬಾರಿ ಸೋಲುಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ
ಮುಂದಿನ ಐಪಿಎಲ್ ನಲ್ಲಿ ಆಡ್ತಾರಾ ಧೋನಿ? ಎಂಎಸ್ ಡಿ ಕೊಟ್ಟ ಉತ್ತರವೇನು ಗೊತ್ತಾ?
ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್ ಆಗಲಿರುವ ವಿವಿಎಸ್ ಲಕ್ಷ್ಮಣ್
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ಗೆ ಲಗ್ಗೆ ಇಟ್ಟ ನಿಖತ್ ಜರೀನ್