Connect with us


      




ಸಾಮಾನ್ಯ

ಅಂಡರ್-19 ವರ್ಲ್ಡ್ ಕಪ್: ಅದ್ಭುತ್ ಕ್ಯಾಚ್ ಹಿಡಿದ ಕೌಶಲ್ ತಾಂಬೆ!

Iranna Anchatageri

Published

on

ಆಂಟಿಗುವಾ: ಫೆಬ್ರವರಿ 06 (ಯು.ಎನ್.ಐ.) ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ಐದನೇ ಬಾರಿಗೆ ಅದ್ಭುತ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯದ ವೇಳೆ, ಭಾರತೀಯ ಫೀಲ್ಡರ್‌ಗಳು ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿದ್ರು. ಅಂತಿಮ ಪಂದ್ಯದಲ್ಲಿ ಕೌಶಲ್ ತಾಂಬೆ ಹಿಡಿದ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನಿಂಗ್ಸ್‌ನ 44ನೇ ಓವರ್‌ನಲ್ಲಿ ರವಿಕುಮಾರ್ ಎಸೆತದಲ್ಲಿ ಜೇಮ್ಸ್ ಡೀಪ್ ಸ್ಕ್ವೇರ್ ಲೆಗ್ ನತ್ತ ಏರಿಯಲ್ ಶಾಟ್ ಹೊಡೆದ್ರು. ಈ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ಇದ್ದ ಕೌಶಲ್ ತಾಂಬೆ ಅವರ ಕೈಯಿಂದ ಕ್ಯಾಚ್ ಜಾರಿತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾಲ್ ನೆಲಕ್ಕೆ ತಾಗುತ್ತಿತ್ತು. ಈ ವೇಳೆ ಛಲ ಬಿಡದ ತಾಂಬೆ ಮೂರನೇ ಪ್ರಯತ್ನದಲ್ಲಿ ಡೈವಿಂಗ್ ಮಾಡುವ ಮೂಲಕ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಈ ಅದ್ಭುತ ಕ್ಯಾಚ್‌ನಿಂದಾಗಿ ಇಂಗ್ಲೆಂಡ್ ಆಟಗಾರ (95 ರನ್) ಶತಕ ವಂಚಿತರಾದರು.

https://www.instagram.com/reel/CZmjQeult1q/?utm_source=ig_embed&ig_rid=1aece08b-6bd2-408c-954a-5a548210ccec

Share