Connect with us


      
ಕರ್ನಾಟಕ

ಯು.ಎನ್.ಐ. ಪತ್ರಿಕೆ, ಓದುಗರ ನೆಚ್ಚಿನ ಸುದ್ದಿಸಂಸ್ಥೆ: ಸಿಎಂ ಬೊಮ್ಮಾಯಿ

Iranna Anchatageri

Published

on

ಬೆಂಗಳೂರು: ಡಿಸೆಂಬರ್ 08 ( ಯು.ಎನ್.ಐ.) ಬಹುತೇಕ ಪತ್ರಿಕೆಗಳು ಯು.ಎನ್.ಐ. ಸಂಸ್ಥೆಯಿಂದ ಸುದ್ದಿಗಳನ್ನು ತೆಗೆದುಕೊಂಡು ಪ್ರಕಟಿಸುತ್ತಿದ್ದವು. ಈ ಸಂಸ್ಥೆ ನೀಡಿದ ಸುದ್ದಿಗಳು ಓದುಗರ ನಂಬಿಕೆಗೆ ಪಾತ್ರವಾಗಿದ್ದವು.‌ ಅದು ಈಗಲೂ ಅದೇ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು. ಅವರಿಂದು ನಗರದ ಶಕ್ತಿಭವನದಲ್ಲಿ ಯು.ಎನ್.ಐ. ಕನ್ನಡ ಹೊಸ ಆವೃತ್ತಿ ಜಾಲತಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನೂತನ ಯುಎನ್ಐ ಕನ್ನಡ ವೆಬ್ ಸೈಟ್ ಲೋಕಾರ್ಪಣೆ

ಯು.ಎನ್.ಐ. 1961ರಲ್ಲಿ ಮೊದಲಿಗೆ ಇಂಗ್ಲಿಷ್ ನಲ್ಲಿ ಸುದ್ದಿಗಳನ್ನು ನೀಡಲು ಆರಂಭಿಸಿತು. ನಂತರ ಹಿಂದಿ, ಉರ್ದು ಭಾಷೆಗಳಲ್ಲಿ ಸುದ್ದಿಸೇವೆ ಒದಗಿಸುತ್ತಿದೆ ಎಂದ ಸಿಎಂ ಈ ಸಂಸ್ಥೆಯ ಸುದ್ದಿಜಾಲ ರಾಷ್ಟ್ರಾದ್ಯಂತ ಹರಡಿರುವುದು ಗಮನಾರ್ಹ ಎಂದು ನುಡಿದರು. ಇಂಥ ಸಂಸ್ಥೆ ಕನ್ನಡದಲ್ಲಿಯೂ ಸುದ್ದಿಸೇವೆ ಆರಂಭಿಸಿದೆ. ಇದರ ನೂತನ ಜಾಲತಾಣವನ್ನು ಸಂತೋಷದಿಂದ ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದರು.
ಇದು ಪ್ರತಿಯೋರ್ವ ಕನ್ನಡಿಗರನ್ನು ಮುಟ್ಟಲಿ, ಜನಪರವಾಗಿರಲಿ, ಸಂಸ್ಥೆಯ ಗತವೈಭವ ಕರ್ನಾಟಕದಲ್ಲಿ ಸ್ಥಾಪನೆಯಾಗಲಿ. ಆಲ್ ದ ಬೆಸ್ಟ್ ಯು.ಎನ್.ಐ. ಕನ್ನಡ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಯು.ಎನ್.ಐ. ಕನ್ನಡ ಜಾಲತಾಣಕ್ಕೆ ಚಾಲನೆ ನೀಡಿದರು.

ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನಿರ್ದೇಶಕ ಹಾಗೂ ಯು.ಎನ್.ಐ. ಸಂಸ್ಥೆ ಚೇರ್ಮನ್ ಸಾಗರ್ ಮುಖ್ಯೋಪಾಧ್ಯಾಯ್, ಮಣಿಪಾಲ್ ಗ್ರೂಪ್ ಕಾನೂನು ಘಟಕದ ಮುಖ್ಯಸ್ಥ ಹಾಗೂ ಯು.ಎನ್.ಐ. ನಿರ್ದೇಶಕ ಬಿನೋದ್ ಕುಮಾರ್ ಮಂಡಲ್, ಮಣಿಪಾಲ್ ಗ್ರೂಪಿನ ಪ್ರಮುಖರು, ಯು.ಎನ್.ಐ. ಕರ್ನಾಟಕ ಘಟಕದ ಮುಖ್ಯಸ್ಥ ಕುಮಾರ ರೈತ, ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ಉಪಸ್ಥಿತರಿದ್ದರು.

ನೂತನ ವೆಬ್‌ಸೈಟ್‌ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಯುಎನ್ಐ ಚೇರ್ಮನ್ ಸಾಗರ್ ಮುಖ್ಯೋಪಾಧ್ಯಾಯ್, ನಿರ್ದೇಶಕ ಬಿನೋದ್ ಕುಮಾರ್ ಮಂಡಲ್, ಯುಎನ್ಐ ಕರ್ನಾಟಕ ಬ್ಯೂರೋ ಮುಖ್ಯಸ್ಥ ಕುಮಾರ ರೈತ ಹಾಗೂ ಹಿರಿಯ ರಾಜಕೀಯ ವರದಿಗಾರ ಅಂಕಣ ಬರಹಗಾರ ಶಂಕರ್ ಪಾಗೋಜಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

(ಯುಎನ್ಐ ಕನ್ನಡ ನೂತನ ವೆಬ್‌ಸೈಟ್‌ನ ಲೋಕಾರ್ಪಣೆಯ ಫೋಟೋ ಸಂಗ್ರಹ)

 

Share