Connect with us


      
ರಾಜಕೀಯ

ರಾಜ್ಯದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರವಾಸ

Kumara Raitha

Published

on

ಬೆಂಗಳೂರು: ಮೇ ೧೪ (ಯು.ಎನ್.‌ಐ.) ರಾಜ್ಯದಲ್ಲಿ ಇಂದು   ಕೇಂದ್ರ ವಿತ್ತ ಸಚಿವೆ  ಸೀತಾರಾಮನ್‌ ಅವರು ಪ್ರವಾಸ ಕೈಗೊಂಡಿದ್ದಾರೆ.

ಇಂದು ಅವರು ಉಡಪಿಯ ಶ್ರೀಕೃಷ್ಣ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಕಾರ್ಯಕ್ರಮ ಹೊಂದಿದ್ದಾರ. ಮಧ್ಯಾಹ್ನ ೨.೩೦ಕ್ಕೆ ಉಡುಪಿ ಕುಕ್ಕಿಕಟ್ಟೆಯಲ್ಲಿರುವ ಶ್ರೀಕೃಷ್ಣ ಬಾಲನಿಕೇತನದಲ್ಲಿ ವಿಸ್ತರಿತ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೪ಗಂಟೆಗೆ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಎರಡು ಕಾರ್ಯಕ್ರಮಗಳಲ್ಲಿ ನಿರ್ಮಲಾ ಸೀತಾರಾಮನ್‌ ಭಾಗಿಯಾಗಲಿದ್ದಾರೆ.

ಇದೇ ಜೂನ್‌ ತಿಂಗಳಿನಲ್ಲಿ ಬಿಜೆಪಿ ಪಕ್ಷದ ನಿರ್ಮಲಾ ಸೀತಾರಾಮನ್‌ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಅಂತ್ಯಗೊಳ್ಳಲಿದೆ. ಮತ್ತೊಂದು ಅವಧಿಗೆ ಅವರು ಪುನಾರಾಯ್ಕೆ ಆಗುವ ಸಾಧ್ಯತೆಯಿದೆ.

Share