Published
6 months agoon
By
Vanitha Jainಬೆಂಗಳೂರು: ಜನೆವರಿ 06 (ಯು.ಎನ್.ಐ.) ಸುಖಕರ ಪ್ರಯಾಣವರದ್ದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಾಹಿರಾತು ನೀಡುವ ವೊಲ್ವೊ ಕ್ಲಬ್ ಕ್ಲಾಸ್ ಅಡಿಗಡಿಗೆ ತಾಂತ್ರಿಕ ತೊಂದರೆಗೆ ಸಿಲುಕಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇಂದು ಮಂಗಳೂರಿನಿಂದ ಸುಮಾರು 10 ಗಂಟೆಗೆ ಬೆಂಗಳೂರಿನತ್ತ ಹೊರಟ KA 01 F 9136 ನಂಬರಿನ ವೊಲ್ವೊ ಕ್ಲಬ್ ಕ್ಲಾಸ್ ಬಸ್ ರಸ್ತೆಯುದ್ಧಕ್ಕೂ ತಾಂತ್ರಿಕ ತೊಂದರೆಗಳಿಂದ ಪದೇ ಪದೇ ನಿಲುಗಡೆಯಾಗುತ್ತಲೇ ಇದೆ. ನಿಗದಿತ 11.05ಕ್ಕೆ ಪುತ್ತೂರು ತಲುಪಬೇಕಿದ್ದ ಬಸ್ ತಲುಪಿದ್ದು 11.35ಕ್ಕೆ ಹಾಗೂ ಹೀಗೂ ಡ್ರೈವರ್ ಕಸರತ್ತಿನಿಂದ ಸುಳ್ಯ ತಲುಪಿದ ಬಸ್ ಅಲ್ಲಿ ಒಂದು ತಾಸು ಸಮಯ ನಿಲುಗಡೆಯಾಯಿತು.
ಚಾಲಕ ವಿಡಿಯೋ ಕಾಲ್ ಮಾಡಿ ವೊಲ್ವೊ ಮೆಕ್ಯಾನಿಕ್ ಗಳೊಂದಿಗೆ ಮಾತನಾಡಿ ಅವರ ಸಲಹೆಯಂತೆ ಒಂದಷ್ಟು ತಾಂತ್ರಿಕ ಕೆಲಸ ಮಾಡಿದರು. ಆದರೆ ಸುಳ್ಯದಿಂದ ಮುಂದೆ ಹತ್ತನೆರಡು ಕಿಲೋಮೀಟರ್ ಕ್ರಮಿಸುವಷ್ಟರಲ್ಲಿ ಮತ್ತೆ ನಿಲುಗಡೆಯಾಯಿತು.
ಚಡಾವುನಿಂದ ಮುಂದೆ ಏರು, ತಿರುವುಗಳ ಘಾಟಿ ಮಾರ್ಗ. ಅಲ್ಲಿ ವಾಹನ ಚಲಾಯಿಸಬೇಕಾದರೆ ಅದು ತಾಂತ್ರಿಕವಾಗಿ ಉತ್ತಮವಾಗಿರಬೇಕು. ಆದರೆ ಚಡಾವು ದಾಟುತ್ತಿದಂತೆ ಮತ್ತೆ ಬಸ್ ಸ್ಥಗಿತವಾಯಿತು. ಚಾಲಕ ಮತ್ತೆ ಕಸರತ್ತು ಮಾಡಿ ಚಾಲನೆ ಮಾಡಿದರು. ಆಮೆಗಿಂತಲೂ ಮಂದಗತಿಯಲ್ಲಿ ವಾಹನ ಸಾಗತೊಡಗಿತು.
“ಮಡಿಕೇರಿ ತನಕ ತಲುಪಿಸಬಲ್ಲೆ. ಅಲ್ಲಿಂದ ಮುಂದಕ್ಕೆ ಗೊತ್ತಿಲ್ಲ, ಇದು ಚಾಲಕ ಮತ್ತೆ ಮತ್ತೆ ಹೇಳುತ್ತಿರುವ ಮಾತು ಇಂದು ರಾತ್ರಿ 10 ರಿಂದ ರಾತ್ರಿಕಫ್ರ್ಯೂ ಆರಂಭವಾಗಲಿದೆ. ಆಟೋ, ಟ್ಯಾಕ್ಸಿ ಹಿಡಿದು ಮನೆ ತಲುಪಲು ಬಸ್ ಕನಿಷ್ಟ 8.30ಕ್ಕಾದರೂ ಬೆಂಗಳೂರು ತಲುಪಬೇಕು. ಆದರೆ ಮಾರ್ಗದಲ್ಲಿ ವಿಳಂಬವಾಗಿರುವುದರಿಂದ ನಿಗದಿತ ವೇಳೆ (ರಾತ್ರಿ 8.30) ತಲುಪಲು ಸಾಧ್ಯವಿಲ್ಲ.
ವೋಲ್ವೊ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ಪ್ತಯಾಣಿಕರು ದುಬಾರಿ ದರ ನೀಡಿ ಪಯಣಿಸುತ್ತಾರೆ. ಈ ಬಸ್ ತಾಂತ್ರಿಕ ವಿವರಗಳ ಪರಿಚಯ ಸಾಮಾನ್ಯ ಬಸ್ ಮೆಕ್ಯಾನಿಕ್ ಗಳಿಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ಡಿಪೋ ಬಿಡುವ ಮೊದಲು ಬಸ್ ಅನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿದ್ದರೆ ತೊಂದರೆಗಳಾಗುತ್ತಿರಲಿಲ್ಲ. ಇದು ಅಧಿಕಾರಿಗಳ ಅಸಡ್ಡೆ, ಉದಾಸೀನದಿಂದಾಗಿಯೇ ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ.
“ಡಿಕೆಶಿ ಮಾತಾಡಲು ಅವಕಾಶ ಕೊಟ್ಟಿಲ್ಲ” – ಶಿಸ್ತು ಸಮಿತಿ ನೋಟಿಸ್ಗೆ ಲಕ್ಷ್ಮೀನಾರಾಯಣ ಟೀಕಾಪ್ರಹಾರ
ರಾಜ್ಯದಲ್ಲಿ ಮಳೆ ಆರ್ಭಟ: ನಾಳೆ ಸಭೆ ಕರೆದ ಮುಖ್ಯಮಂತ್ರಿ ಬೊಮ್ಮಾಯಿ
“ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು” – ಸಿಎಂ ಬೊಮ್ಮಾಯಿ
45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ
ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ
‘ವೀರೇಂದ್ರ ಹೆಗ್ಗಡೆಯವರ ಅನುಭವ ಇಡೀ ದೇಶಕ್ಕೆ ಲಾಭ ತಂದುಕೊಡಲಿದೆ’