Published
6 months agoon
By
UNI Kannadaಲಕ್ನೋ, ಜ 4(ಯುಎನ್ ಐ) ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಅದು ಕೇವಲ ಒಂದು ಸಾಮಾನ್ಯ ವೈರಲ್ ಜ್ವರ ಎಂದು ತಳ್ಳಿಹಾಕಿದ್ದಾರೆ.
‘ಓಮಿಕ್ರಾನ್’ ವೇಗವಾಗಿ ಹರಡುತ್ತಿರುವುದು ಸತ್ಯ. ಕೋವಿಡ್ ಎರಡನೇ ಅಲೆಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರಿ ಸ್ವಲ್ಪ ದುರ್ಬಲವಾಗಿದೆ ಎಂಬುದು ನಿಜ. ಇದು ಸಾಮಾನ್ಯ ವೈರಲ್ ಜ್ವರ. ಯಾವುದೇ ಇತರ ರೋಗದಂತೆ, ಇದಕ್ಕೆ ಮುನ್ನೆಚ್ಚರಿಕೆ ಹಾಗೂ ಜಾಗರೂಕತೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.