Published
6 months agoon
By
UNI Kannadaಲಕ್ನೋ, ಜ 2(ಯು ಎನ್ ಐ) ಮುಂಬರುವ ಉತ್ತರ ಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಲಿರುವುದು ಖಚಿತ, ಆದರೆ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳ ಪ್ರಶ್ನೆಗೆ ಯೋಗಿ ಅದಿತ್ಯನಾಥ್ ಈ ಉತ್ತರ ನೀಡಿದ್ದಾರೆ. ಯೋಗಿ ಅದಿತ್ಯ ನಾಥ್ ಪ್ರಸ್ತುತ ರಾಜ್ಯ ಮೇಲ್ಮನೆಯ ಸದಸ್ಯರಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವಕ್ಷೇತ್ರದಿಂದ ಸ್ಪರ್ಧಿಸಲಿದ್ದೀರಿ ? ಅಯೋಧ್ಯೆ, ಮಥುರಾ, ಅಥವಾ, ಸ್ವಂತ ಜಿಲ್ಲೆ ಗೋರಖ್ಪುರದಿಂದಲೇ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್, ಬಿಜೆಪಿ ಹೈಕಮಾಂಡ್ ಎಲ್ಲಿಂದ ಸ್ಪರ್ಧಿಸಿ ಎಂದು ಸೂಚಿಸುತ್ತದೆಯೋ ಅಲ್ಲಿಂದ ಸ್ಪರ್ಧಿಸುತ್ತೇನೆ ಎಂದು ಉತ್ತರಿಸಿದರು.
ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಲು ಸಾಧ್ಯವಾಗದ ಕೆಲಸವೇನಾದರೂ ಇದೆಯೇ? ಎಂಬ ಪ್ರಶ್ನೆಗೆ ಭರವಸೆ ನೀಡಿದ ಎಲ್ಲವನ್ನೂ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಪಕ್ಷದ ಕೆಲ ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂಬ ಆತಂಕ ದೂರ ಮಾಡಲು ಯತ್ನಿಸಿದರು. ಬಿಜೆಪಿ ಬಹಳ ದೊಡ್ಡ ಕುಟುಂಬ. ಕುಟುಂಬದ ಸದಸ್ಯರ ಪಾತ್ರ ಕಾಲಕ್ರಮದಲ್ಲಿ ಬದಲಾಗಬಹುದು. ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ವಿಭಿನ್ನ ಸಮಯಗಳಲ್ಲಿ ವಿಭಿನ್ನವಾಗಿರುತ್ತದೆ ಎಂದು ಹೇಳಿದರು. ಒಬ್ಬ ವ್ಯಕ್ತಿ ಯಾವಾಗಲೂ ಸರ್ಕಾರದಲ್ಲಿ ಇರಬೇಕೆಂದಿಲ್ಲ, ಅವರು ಪಕ್ಷಕ್ಕಾಗಿ ದುಡಿಯಬಹುದು ಎಂದರು.
ಚುನಾವಣಾ ಪ್ರಚಾರದ ವೇಳೆ ಕೋವಿಡ್ -19 ಸಾಂಕ್ರಾಮಿಕ ನಿಗ್ರಹ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಸರಿಸುವುದಾಗಿ ಹೇಳಿದರು. 2017ರಲ್ಲಿ ನಡೆದ ಚುನಾವಣೆಯಲ್ಲಿ ಆಗಿನ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಿದ್ದವು, ಈಗ ತಮ್ಮ ಸರ್ಕಾರದ ಯಶಸ್ವಿನ ಆಧಾರದ ಮೇಲೆ ಮತ ಯಾಚಿಸಲಿದ್ದೇವೆ ಎಂದರು.
ಜನ ತಪ್ಪುಗಳನ್ನು ಮಾಡುತ್ತಾರೆ ಆದರೆ ಅವುಗಳನ್ನು ಸರಿಪಡಿಸಬಹುದು: ಸಿಎಂ ಮಮತಾ ಬ್ಯಾನರ್ಜಿ
ಮಹಾರಾಷ್ಟ್ರ ಸರ್ಕಾರ; ಬಿಜೆಪಿಯ 25, ಶಿಂಧೆ ಟೀಂನ 13 ಮಂತ್ರಿಗಳನ್ನು ಹೊಂದುವ ಸಚಿವ ಸಂಪುಟ
ಟಿಎಂಸಿ ನಾಯಕ ಸೇರಿದಂತೆ ಆತನ ಇಬ್ಬರು ಸಹಚರರ ಹತ್ಯೆ
‘ಸಿದ್ದರಾಮಯ್ಯ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ’ – ರೇಣುಕಾಚಾರ್ಯ
ಧರ್ಮವನ್ನು ವ್ಯಕ್ತಿಗಳಿಗೆ ಖಾಸಗಿಯಾಗಿ ಆಚರಿಸಲು ಬಿಡಬೇಕು; ಮೊಯಿತ್ರಾ ವಿವಾದಕ್ಕೆ ಶಶಿತರೂರ್ ಪ್ರತಿಕ್ರಿಯೆ
ಲೋಕಸಭೆಯಲ್ಲೂ ಟೀಂ ಠಾಕ್ರೆ vs ಟೀಂ ಶಿಂಧೆ