Connect with us


      
ದೇಶ

ಸೈನಿಕ ಶಾಲೆಗೆ ಜನರಲ್ ಬಿಪಿನ್ ರಾವತ್ ಹೆಸರು

UNI Kannada

Published

on

ಲಕ್ನೋ. ಜ 7(ಯುಎನ್‌ ಐ) – ದಿವಂಗತ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೆಸರನ್ನು ಮೈನ್‌ ಪುರಿ ಜಿಲ್ಲೆಯ ಸೇನಾ ಶಾಲೆಗೆ ಇರಿಸಲು ಉತ್ತರ ಪ್ರದೇಶ ರಾಜ್ಯ ಸರ್ಕಾರ ನಿರ್ಧರಿಸಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮೃತಪಟ್ಟ ರಾವತ್ ಅವರಿಗೆ ಗೌರವ ಸಲ್ಲಿಸುವ ಕ್ರಮವಾಗಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಗುರುವಾರ ಟ್ವೀಟ್‌ನಲ್ಲಿ ತಿಳಿಸಿದೆ.

2019 ಏಪ್ರಿಲ್‌ 1ರಂದು ಸೈನಿಕ ಶಾಲೆಯನ್ನು ಉದ್ಘಾಟಿಸಲಾಗಿತ್ತು. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಾವತ್. ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ 13 ಮಂದಿ ಹುತಾತ್ಮಗೊಂಡಿದ್ದರು.

Share