Connect with us


      
ದೇಶ

ಧರ್ಮ ಬದಲಿಸಿ ಮದುವೆಯಾಗುವಂತೆ ಒತ್ತಡ ಹೇರಲು ಶಿಕ್ಷಕಿಯ ರೇಪ್!

Lakshmi Vijaya

Published

on

ಶಹಜಹಾನ್‌ಪುರ (ಯುಪಿ): ಮೇ 13 (ಯು.ಎನ್.ಐ.) ತನ್ನ ಧರ್ಮವನ್ನು ಬದಲಿಸಿ ಮದುವೆಯಾಗುವಂತೆ ಒತ್ತಡ ಹೇರುವ ಉದ್ದೇಶದಿಂದ 28 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನ ರೇಪ್ ಮಾಡಿ, ಆ ಕುಕೃತ್ಯದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿತ್ತು ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಮೀರ್ ಸೇರಿದಂತೆ ಐವರ ವಿರುದ್ಧ ಉತ್ತರ ಪ್ರದೇಶದ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.  ಗುರುವಾರ ದಾಖಲಾದ ಎಫ್‌ಐಆರ್‌ನಲ್ಲಿ ಆರೋಪಿಯ  ತಾಯಿ, ಸಹೋದರಿ, ಸಹೋದರ ಮತ್ತು ಇನ್ನೊಬ್ಬ ಸಂಬಂಧಿಕರ ಹೆಸರೂ ಇದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೇ 4 ರಂದು ಮಹಿಳೆ ತನ್ನ ಮನೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ಆರೋಪಿ ಆಕೆಯನ್ನು ಡ್ರಾಪ್ ಮಾಡಲು ಮುಂದಾದ. ಈ ವೇಳೆ ಆಕೆಯ ಮೇಲೆ ಯಾವುದೋ ವಸ್ತುವನ್ನ ಸಿಂಪಡಿಸಿ ಪ್ರಜ್ಞಾಹೀನಳನ್ನಾಗಿ ಮಾಡಿದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಅಧೀಕ್ಷಕ (ನಗರ) ಸಂಜಯ್ ಕುಮಾರ್ ಮಾತನಾಡಿ ಆರೋಪಿ ಅಮೀರ್ ಅವರ ಕುಟುಂಬ ಸದಸ್ಯರು ಮತಾಂತರಗೊಂಡು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

Share