Connect with us


      
ವಿದೇಶ

ಡೊನಾಲ್ಡ್‌ ಟ್ರಂಪ್‌ ಅಪಹರಿಸಿ.. ಹತ್ಯೆಗೆ ಸಂಚು..!

UNI Kannada

Published

on

ನ್ಯೂಯಾರ್ಕ್, ಜ 11(ಯುಎನ್‌ ಐ) – ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ನಡೆಸುವುದಾಗಿ ಬೆದರಿಕೆ ಹಾಕಿದ್ದ 72 ವರ್ಷದ ಥಾಮಸ್ ವೆಲ್ನಿಕ್ ಎಂಬ ವ್ಯಕ್ತಿಯನ್ನು ‌ ಅಮೆರಿಕಾ ಸೀಕ್ರೆಟ್ ಸರ್ವಿಸ್ ನ್ಯೂಯಾರ್ಕ್‌ನಲ್ಲಿ ಬಂಧಿಸಿದೆ. ಟ್ರಂಪ್‌ 2020 ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಅಧಿಕಾರ ತೊರೆಯಲು ನಿರಾಕರಿಸಿದರೆ ಟ್ರಂಪ್ ಅವರನ್ನು ಅಪಹರಿಸಿ ಹತ್ಯೆ ನಡೆಸುವುದಾಗಿ ಅಮೆರಿಕಾ ಕ್ಯಾಪಿಟಲ್‌ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ.

ಕಳೆದ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಸೀಕ್ರೆಟ್ ಸರ್ವೀಸ್‌ನ ಕಛೇರಿಗೆ ಎರಡು ವಾಯ್ಸ್‌ ಮೇಲ್ ಸಂದೇಶ ಕಳುಹಿಸಿದ ಆರೋಪ ಕೂಡ ವೆಲ್ನಿಕ್ ಮೇಲಿದೆ . ವೆಲ್ನಿಕ್ ಕಳೆದ ನವೆಂಬರ್‌ನಲ್ಲಿ ತನ್ನ ಸೆಲ್ ಫೋನ್‌ನಿಂದ ನ್ಯೂಯಾರ್ಕ್ ಸೀಕ್ರೆಟ್ ಸರ್ವಿಸ್ ಡೆಸ್ಕ್‌ಗೆ ಮೂರು ಕರೆಗಳನ್ನು ಮಾಡಿದ್ದು, ಪ್ರತಿ ಬಾರಿ ಕರೆ ಮಾಡಿದರೂ ತನ್ನ ಹೆಸರಿನಿಂದ ತನ್ನನ್ನು ಪರಿಚಯಿಸಿಕೊಂಡಿದ್ದ ಎಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ಫೆಡರಲ್ ಕೋರ್ಟ್ ಸೋಮವಾರ ಪ್ರಕರಣದ ವಿಚಾರಣೆ ನಡೆಸಿತು.

ಥಾಮಸ್‌ ವೆಲ್ನಿಕ್‌ ಉದ್ದೇಶಪೂರ್ವಕವಾಗಿ ಅಮೆರಿಕಾ ಮಾಜಿ ಅಧ್ಯಕ್ಷರನ್ನು ಅಪಹರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಬ್ರೂಕ್ಲಿನ್ ಹೇಳಿದ್ದಾರೆ. ಮೇಲಾಗಿ ವೆಲ್ನಿಕ್ ಬಳಿ 22 ಕ್ಯಾಲಿಬರ್ ಪಿಸ್ತೂಲ್ ಕೂಡ ಇತ್ತು . ಈ ಸಂಬಂಧ ವೆಲ್ನಿಕ್‌ ಗೆ ಫೆಡರಲ್ ಕೋರ್ಟ್ 3 ಲಕ್ಷ ರೂ.ಗಳ ಷರತ್ತು ಬದ್ಧ ಜಾಮೀನು ನೀಡಿದೆ . ಆದಾಗ್ಯೂ, ರಾತ್ರಿಯಿಡೀ ಗೃಹಬಂಧನದಲ್ಲಿ ಇರಿಸುವಂತೆ, GPS ಮಾನಿಟರಿಂಗ್ ಸಾಧನ ಅಳವಡಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಆತನ ಮಾನಸಿಕ ಸ್ಥಿತಿ ತನಿಖೆ ಮಾಡಿ ಮದ್ಯಪಾನ ಅಥವಾ ಮಾದಕ ವ್ಯಸನಿಯಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯುವಂತೆಯೂ ಸೂಚಿಸಿದೆ.

Share