Published
6 months agoon
By
Vanitha Jainಚೆನ್ನೈ: ಜನೆವರಿ 08 (ಯು.ಎನ್.ಐ.) ತಮಿಳು ನಟ ಅಜಿತ್ ಅಭಿನಯದ ವಮಿಲೈ ಸಿನಿ ತಂಡವು ಒಟಿಟಿ ಫ್ಲ್ಯಾಟ್ ಇಟ್ಟಿದ್ದ 300 ಕೋಟಿ ರೂ. ಬೇಡಿಕೆಯನ್ನು ತಿರಸ್ಕರಿಸಿದೆ.
ಜನವರಿ 13ರಂದು ಸಂಕ್ರಾಂತಿ ಹಬ್ಬದ ವೇಳೆ ಸಿನಿಮಾ ತಂಡವು ಚಿತ್ರವನ್ನು ಬಿಡುಗಡೆಗೊಳಿಸಲು ಅಲೊಚಿಸಿತ್ತು. ಆದರೆ ಕೊರೊನಾ ಕಾರಣ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.
ತಡವಾದ ಮಾತ್ರಕ್ಕೆ ಪ್ರೇಕ್ಷಕರು ಚಿತ್ರವನ್ನು ತಿರಸ್ಕರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಿನಿ ತಂಡ ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಗೆ ಸಮ್ಮತಿಸಲಿಲ್ಲ ಎಂದು ಹೇಳಲಾಗುತ್ತದೆ. ಈ ಸಿನಿಮಾವನ್ನು ಬೋನಿ ಕಪೂರ್ ಅವರು ಹಿಂದಿ ತಮಿಳು ತೆಲುಗು ಮೂರು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ವಮಿಲೈ ಸಿನಿಮಾಕ್ಕೆ ಎಚ್ ವಿನೋತ್ ನಿರ್ದೇಶಕರಾಗಿದ್ದು, ಯುವನ್ ಶಂಕರ್ ರಾಜಾ ಹಾಡುಗಳಿಗೆ ಸಂಗೀತ ನೀಡಿದರೆ, ಹಿನ್ನೆಲೆ ಸಂಗೀತವನ್ನು ಘಿಭ್ರನ್ ಸಂಯೋಜಿಸಿದ್ದಾರೆ. ಹುಮಾ ಖುರೇಷಿ, ಯೋಗಿ ಬಾಬು, ಸುಮಿತ್ರಾ, ಪುಗಜ್, ರಾಜ್ ಅಯ್ಯಪ್ಪ ಇತರೆ ನಟರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ದೊರೆತಿದೆ