Published
6 months agoon
By
Vanitha Jainಚಾಮರಾಜನಗರ :ಡಿಸೆಂಬರ್ 07 (ಯು.ಎನ್.ಐ.): ನನ್ನ ಮೇಲೆ ಕಾಂಗ್ರೆಸ್ ನವರಿಗೆ ಬಹಳ ಪ್ರೀತಿಯಿದೆ, ಅವರು ಪ್ರೀತಿಯನ್ನು ಯಾವ ರೀತಿ ತೋರಿಸುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಎಂಎಲ್ಸಿ ಅಭ್ಯರ್ಥಿ ವಾಟಾಳ್ ನಾಗರಾಜ್ ಹೇಳಿಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಒಂದು ಓಟ್ ಹಾಕಿ ಸಾಕು ಎಂದು ಹೇಳುತ್ತಿದ್ದಾರೆ, ಎರಡನೇ ಓಟ್ ಏನ್ ಮಾಡೋದು ? ಒಂದು ಮತ್ತು ಎರಡನೇ ಓಟ್ ಅನ್ನು ಕೊಡಿ ಎಂದು ಕೇಳಿದ್ದೇನೆ. ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಮತ ಹಾಕಿ ಎರಡನೇ ಮತ ಹಾಕಬೇಡಿ ಎನ್ನುವುದು ಮತದಾರರ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಕ್ಷೇತ್ರದ ಎಲ್ಲಾ ಮತದಾರರು ಒಂದು ಮತವನ್ನು ವಾಟಾಳ್ ನಾಗರಾಜ್ ಗೆ ಕೊಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಣವಿರುವ ವ್ಯಕ್ತಿಗಳನ್ನು ಮೂರು ಪಕ್ಷಗಳು ಅಭ್ಯಾರ್ಥಿಗಳನ್ನಾಗಿ ಆಯ್ಕೆ ಮಾಡುತ್ತಿದ್ದಾರೆ. ಇತಿಹಾಸವಿಲ್ಲದ ಅಭ್ಯಾರ್ಥಿಗಳನ್ನ ಪರಿಷತ್ ಗೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 25 ಕ್ಷೇತ್ರಗಳಿಗೂ ವಿಭಿನ್ನವಾಗಿ, ವಿಚಿತ್ರವಾಗಿ ಮೂರು ಪಕ್ಷಗಳು ಆಯ್ಕೆ ಮಾಡುತ್ತಿವೆ. ರಾಜ್ಯದ ಮೇಲ್ಮನೆಗೆ ತನ್ನದೆ ಆದ ಗೌರವ ಗಾಂಭೀರ್ಯ ವಿದೆ ,ಅದು ಕಲುಸಿತವಾಗಬಾರದು. ನಾನಂತೂ ಒಂದು ನಯಾಪೈಸೆ ಕೊಟ್ಟಿಲ್ಲ, ನನ್ನನ್ನು ಯಾರು ಸಹ ಕೇಳಿಲ್ಲ. ಬಹಳ ಪ್ರೀತಿಯಿಂದ ಅಭಿಮಾನದ ಮೇಲೆ ನನಗೆ ವೋಟ್ ಹಾಕುವುದಾಗಿ ಮತದಾರರು ಹೇಳಿದ್ದಾರೆ. ವಿಧಾನ ಪರಿಷತ್ ಅನ್ನು ಕ್ಲಬ್ ಮಟ್ಟಕ್ಕೆ ಇಳಿಸಬಾರದು ಎಂದರು.
ರಾಜ್ಯದಲ್ಲಿ ಮೂರು ಪಕ್ಷಗಳು ಪ್ರಮಾಣಿಕರು, ನಂಬಿಕಸ್ಥರನ್ನು ಆಯ್ಕೆ ಮಾಡಬೇಕು. ಚುನಾವಣೆಯಲ್ಲಿ ವಿಪರೀತ ಹಣ ಖರ್ಚುಮಾಡುವುದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ರಾಜ್ಯದ 25 ಕ್ಷೇತ್ರದಲ್ಲಿ ನಡೆಯುತ್ತಿರುವ ಹಣದ ಹೊಳೆ ಹಾಗೂ ಹಣದ ರೂಪದಲ್ಲಿ ನಡೆಯುತ್ತಿರುವ ದಂಧೆಗೆ ಕಡಿವಾಣ ಹಾಕಬೇಕು ಎಂದು ಚುನಾವಣಾ ಆಯೋಗದ ವಿರುದ್ದ ಹರಿಹಾಯ್ದರು.
ಸೋನಿಯಾ ಗಾಂಧಿ ಆಪ್ತನ ಮಗ ಆಮ್ ಆದ್ಮಿ ಪಕ್ಷದ ಮೇಲೆ ಒಲವು ತೋರಿದ್ದಾರಾ?
ಪಕ್ಷದ ಸಾಧನೆ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ: ಸೋನಿಯಾ ಗಾಂಧಿ
ತನ್ನ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಗೆ ವರ್ಗಾಯಿಸಿದ ವೃದ್ಧೆ..ಕಾರಣವೇನು?
ಮೀಸಲು ಸೌಲಭ್ಯ ಕಲ್ಪಿಸದೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ: ಸಿದ್ದರಾಮಯ್ಯ
ವಿಧಾನ ಪರಿಷತ್ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ
ಇಂಧನ ಬೆಲೆ ಏರಿಕೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರ ಪ್ರತಿಭಟನೆ