Connect with us


      




ದೇಶ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಗೆ ಕೊರೊನಾ ಪಾಸಿಟೀವ್

UNI Kannada

Published

on

ಜನೆವರಿ 23 (ಯು.ಎನ್.ಐ.) ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಎಲ್ಲರೂ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಪಾಸಿಟೀವ್ ಎಂದು ತಿಳಿದು ಬಂದಿದೆ. ಇದರೊಂದಿಗೆ ವೆಂಕಯ್ಯ ನಾಯ್ಡು ಈಗ ತಮ್ಮ ನಿವಾಸದಲ್ಲೆ ಐಸೋಲೇಶನ್‌ ನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇಂದು ನಡೆಸಿದ ಕರೋನಾ ಪರೀಕ್ಷೆಗಳಲ್ಲಿ ನನಗೆ ಕೋವಿಡ್‌ನ ಪಾಸಿಟೀವ್ ಧೃಢಪಟ್ಟಿದೆ. ವೈದ್ಯರ ಸೂಚನೆಯಂತೆ ಒಂದು ವಾರ ಸ್ವಯಂ ನಿರ್ಭಂಧನದಲ್ಲಿ ಇರುವುದಾಗಿ ತಿಳಿಸಿದರು. ಈ ನಡುವೆ ಅವರನ್ನು ಭೇಟಿಯಾದವರು ಕೊರೊನಾ ಪರೀಕ್ಷೆಗೆ ಒಳಗಾಗಬೇಕು. ಉಪರಾಷ್ರ್ಟಪತಿ  ವೆಂಕಯ್ಯ ನಾಯ್ಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Share