Connect with us


      




ದೇಶ

ಚಲಿಸುತ್ತಿದ್ದ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್!

Vanitha Jain

Published

on

ಚೆನ್ನೈ: ಮಾರ್ಚ್ 24 (ಯು.ಎನ್.ಐ.) ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಕ್ಲಿಪ್ ಅನ್ನು ವಿದ್ಯಾರ್ಥಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ನಂಬಲಾಗಿದೆ. ಈ ವಿಡಿಯೋದಲ್ಲಿ ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಬಿಯರ್ ಕುಡಿಯುವುದು ಸೆರೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ನಂಬಲಾಗಿದೆ.

ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿದ್ದು, ಮಂಗಳವಾರ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದಲ್ಲಿ ತಿರುಕಝುಕುಂದ್ರಂನಿಂದ ತಾಚೂರ್ ಗೆ ಬಸ್‌ನಲ್ಲಿದ್ದರು. ಘಟನೆಯನ್ನು ಅಧಿಕಾರಿಗಳು ಗಮನಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Share