Connect with us


      
ರಾಜಕೀಯ

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಗ್ರಾಮಾಂತರ ಶೇಖಡ 99.91ರಷ್ಟು ಮತದಾನ.

UNI Kannada

Published

on

ಬೆಂಗಳೂರು ಗ್ರಾಮಾಂತರ: ಡಿಸೆಂಬರ್ 10:(ಯು.ಎನ್.ಐ) ವಿಧಾನ ಪರಿಷತ್ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಶೇ.99.91ರಷ್ಟು ಮತದಾನ ನಡೆದಿದೆ.

ಒಟ್ಟು 3923 ಮತದಾರರಲ್ಲಿ 1868 ಪುರುಷ ಮತ್ತು 2055 ಮಹಿಳಾ ಮತದಾರರ ಪೈಕಿ, 1865 ಪುರುಷ ಮತ್ತು 2044 ಮಹಿಳಾ ಮತದಾರರು ಸೇರಿದಂತೆ ಒಟ್ಟು 3918 ಮಂದಿ ಮತಚಲಾಯಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನಲ್ಲಿ 582 ಮತದಾರರ ಪೈಕಿ 579 ಮತದಾರರು, ದೇವನಹಳ್ಳಿ ತಾಲ್ಲೂಕಿನಲ್ಲಿ 396 ಮತದಾರರ ಪೈಕಿ 396, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 515 ಮತದಾರರ ಪೈಕಿ 515, ನೆಲಮಂಗಲ ತಾಲ್ಲೂಕಿನಲ್ಲಿ 371ಮತದಾರರ ಪೈಕಿ 371, ಮಾಗಡಿ ತಾಲ್ಲೂಕಿನಲ್ಲಿ 479 ಮತದಾರರ ಪೈಕಿ 479, ರಾಮನಗರ ತಾಲ್ಲೂಕಿನಲ್ಲಿ 390 ಮತದಾರರ ಪೈಕಿ 390, ಕನಕಪುರ ತಾಲ್ಲೂಕಿನಲ್ಲಿ
677 ಮತದಾರರ ಪೈಕಿ 675 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 513 ಮತದಾರರ ಪೈಕಿ 513 ಮತದಾರರು ಮತಚಲಾಯಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನಲ್ಲಿ 99.48%, ದೇವನಹಳ್ಳಿ ತಾಲ್ಲೂಕಿನಲ್ಲಿ 100%, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇ.100%, ನೆಲಮಂಗಲ ತಾಲ್ಲೂಕಿನಲ್ಲಿ ಶೇ.100%, ಮಾಗಡಿ ತಾಲ್ಲೂಕಿನಲ್ಲಿ ಶೇ.100%, ರಾಮನಗರ ತಾಲ್ಲೂಕಿನಲ್ಲಿ ಶೇ. 100%, ಕನಕಪುರ ತಾಲ್ಲೂಕಿನಲ್ಲಿ ಶೇ.99.85% ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಶೇ.100% ರಷ್ಟು ಮತದಾನ ನಡೆದಿದೆ.

Share