Published
5 months agoon
ಬೆಳಗಾವಿ: ಡಿಸೆಂಬರ್ ೧೩ (ಯು.ಎನ್.ಐ.) ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು,
ಅವರಿಂದು ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಲಖನ್ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿ ಗೆಲುವಿಗೆ ಅಡ್ಡಿಯಿಲ್ಲ ಎಂದು ಪುನರುಚ್ಚರಿಸಿದ ಅವರು ಅವರಲ್ಲೇ ಒಬ್ಬರು ಸೋಲುತ್ತಾರೆ. ಲಖನ್ ಸ್ಪರ್ಧೆಯಿಂದ ನಮ್ಮಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ. ಅವರು ಕಾಂಗ್ರೆಸ್ ಅಭ್ಯರ್ಥಿಗೆ ಪೈಪೋಟಿ ನೀಡಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಅವರು ಮೊದಲು ಆ ಕಾಯಿದೆಯನ್ನು ಜಾರಿಗೆ ತರಲಿ, ಅದರಲ್ಲಿ ಏನಿದೆಯೋ ಇಲ್ಲವೋ ಗೊತ್ತಿಲ್ಲ. ಈಬಗ್ಗೆ ಈಗಾಗಲೇ ಕಾನೂನು ಇದೆ. ಇದರ ಕುರಿತು ನಮ್ಮ ಶಾಸಕಾಂಗ ಪಕ್ಷದಲ್ಲಿ ಚರ್ಚೆಯಾಗುತ್ತದೆ. ಚರ್ಚೆ ನಂತರ ಕಾಂಗ್ರಸ್ ಪಕ್ಷದ ಅಭಿಪ್ರಾಯ ತಿಳಿಸುತ್ತೇವೆ ಎಂದು ಹೇಳಿದರು.
ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ
ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ
ಎಂಬಿಎ ಪದವೀಧರೆಯಾಗಿದ್ರೂ ಕೆಲಸ ಸಿಗದೆ ಉಡುಪಿಯ ಸಹನಾ ಸಾವು; ಡಿಕೆಶಿ ಸಂತಾಪ
ಓವೈಸಿ.. ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ: ದೇವೇಂದ್ರ ಫಡ್ನವೀಸ್