Connect with us


      




ರಾಜಕೀಯ

ವಿಧಾನ ಪರಿಷತ್ ಸದಸ್ಯರ ಬೀಳ್ಕೊಡುಗೆ

UNI Kannada

Published

on

ಬೆಂಗಳೂರು,ಜನೆವರಿ.05(ಯು.ಎನ್.ಐ)ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಅವರುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ಬೀಳ್ಕೊಟ್ಟರು.

ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ವಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಆಡಳಿತ ಪಕ್ಷ ಬಿಜೆಪಿಯ ಮಹಾಂತೇಶ್ ಕವಟಗಿಮಠ ಮತ್ತು ಸುನೀಲ್ ಸುಬ್ರಮಣಿ, ವಿಪಕ್ಷ ಕಾಂಗ್ರೆಸ್‌ ನಾಯಕ ಎಸ್.ಆರ್.ಪಾಟೀಲ್,ಮಾಜಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ,ಸದಸ್ಯರಾದ ವಿಜಯ್ ಸಿಂಗ್, ಶ್ರೀಕಾಂತ್ ಘೋಟ್ನೇಕರ್, ಬಸವರಾಜ ಪಾಟೀಲ್ ಇಟಗಿ,ಕೆ. ಸಿ. ಕೊಂಡಯ್ಯ, ರಘು ಆಚಾರ್.ಆರ್, ಪ್ರಸನ್ನಕುಮಾರ್, ಪ್ರತಾಪ ಚಂದ್ರ ಶೆಟ್ಟಿ, ಎಂ.ಎ. ಗೋಪಾಲಸ್ವಾಮಿ,ಎಂ ನಾರಾಯಣಸ್ವಾಮಿ, ಆರ್. ಧರ್ಮಸೇನ ಹಾಗೂ ಜೆಡಿಎಸ್‌ನ ಕಾಂತರಾಜ್, ಅಪ್ಪಾಜಿ ಗೌಡ, ಸಂದೇಶ್ ನಾಗರಾಜ್, ಪಕ್ಷೇತರ ವಿವೇಕ್‌ ರಾವ್ ಪಾಟೀಲ್‌ರನ್ನು ಬೀಳ್ಕೊಡಲಾಯಿತು.

ಬೀಳ್ಕೊಡುಗೆ ಸಮಾರಂಭದಲ್ಲಿ ಸಚಿವರೂ ಆಗಿರುವ ಮೇಲ್ಮನೆ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ,ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಭಾಪತಿಗಳಾದ ಶಂಕರಮೂರ್ತಿ, ಬಿ.ಎಲ್.ಶಂಕರ್ ಉಪಸ್ಥಿತರಿದ್ದರು.

Share