Published
5 months agoon
ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್ ೧೫ (ಯು.ಎನ್.ಐ.) ಮೇಲ್ಮನೆ ಚಿಂತಕರ ಚಾವಡಿಯಾಗಿದೆ. ಅದಕ್ಕೆ ಮೊದಲಿನಿಂದಲೂ ಬಹು ಮಹತ್ವವಿದೆ ಎಂದು ವಿಧಾನಪರಿಷತ್ ಸದಸ್ಯ ಬೋಜೇಗೌಡ ಹೇಳಿದರು.
ಅವರಿಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ. ಮೇಲ್ಮನೆ ರದ್ಧು ಪಡಿಸಿ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ಚಿಂತಕರ ಚಾವಡಿ ಅನ್ನೋದು ನಿನ್ನೆ ಮೊನ್ನೆಯದಲ್ಲ. ಇವತ್ತು ಚಿಂತಕರ ಚಾವಡಿ ಈ ಮಟ್ಟಕ್ಕೆ ಬಂದಿದೆಎಲ್ಲಾ ಮುಖಂಡರು ಈ ಬಗ್ಗೆ ಆತ್ಮಾವಲೋಕನಮಾಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ಈಶ್ವರಪ್ಪ ಶಿವಮೊಗ್ಗದಲ್ಲಿ ಸೋತಿದ್ದರು. ಆಗ ವಿಧಾನಪರಿಷತ್ ಅವರಿಗೆ ಆಶ್ರಯಕೊಟ್ಟಿತ್ತು ಲಕ್ಷ್ಮಣ್ ಸವದಿ ಪರಿಷತ್ ಸದಸ್ಯರಾದ ನಂತರ ಡಿಸಿಎಂ ಆದರು. ಅಲ್ಲಿಯವರೆಗೆ ಅವರಿಗೆ ಪರಿಷತ್ ಚೆನ್ನಾಗಿತ್ತಾ, ಡಿಸಿಎಂ ಹೋಗುತ್ತಲೇ ಈಗ ಪರಿಷತ್ ಬೇಡವಾಯ್ತೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಚುನಾವಣೆಗಳಲ್ಲಿ ಹಣದ ಹೊಳೆ ಹರಿಸೋದು ಸರಿಯಲ್ಲ ಇದನ್ನು ತಡೆಯುವ ಮಾರ್ಗೋಪಾಯಗಳನ್ನ ಕಂಡು ಕೊಳ್ಳಬೇಕು ನೆಗಡಿ ದ್ರಾಕ್ಷಿ ಸಿಗದಿದ್ದಾಗ ಹುಳಿ ಅನ್ನಬಾರದು. ಈಗಿನ ಮೇಲ್ಮನೆ ಚುನಾವಣೆಯಂತಾಗಬಾರದು. ದುಡ್ಡಿದ್ದವರಿಗೆ ಇಲ್ಲಿ ಟಿಕೆಟ್ ಕೊಡೋದು ಏಕೆ ಎಲ್ಲ ಪಕ್ಷಗಳು ಅದನ್ನೇ ಮಾಡಿರೋದು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಧಾನಪರಿಷತ್ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಬಬುಲ್ ಸುಪ್ರಿಯೋ ಬಳಿಕ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಟಿಎಂಸಿ ಸೇರಿದ ಬಿಜೆಪಿ ಸಂಸದ
ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಜೈಲಿನಲ್ಲಿಡಲು ಬಯಸಿತ್ತು: ಸಿಎಂ ಕೇಜ್ರಿವಾಲ್
ರೈತರು ಸರ್ಕಾರಗಳನ್ನು ಉರುಳಿಸಬಹುದು: ಸಿಎಂ ಕೆಸಿಆರ್
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ