Connect with us


      




ರಾಜಕೀಯ

ಬೆಳಗಾವಿಯಲ್ಲಿ ಬಿಜೆಪಿ ನಿರೀಕ್ಷೆ ಹುಸಿ: ಬಿಎಸ್ವೈ

Kumara Raitha

Published

on

ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್‌ ೧೪ (ಯು.ಎನ್.ಐ.) ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿವ ಬಗ್ಗೆ ಅಪಾರ ವಿಶ್ವಾಸವಿತ್ತು. ಅದು ಹುಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಅವರಿಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.  ನಾವು ೨೫ ರಲ್ಲಿ ೨೦ ಕ್ಕೆ ಸ್ಪರ್ಧೆ ಮಾಡಿದ್ವಿ ೧೫ ಸ್ಥಾನ ಗೆಲ್ಲವ ನಿರೀಕ್ಷೆ ಇತ್ತು ಆದ್ರೆ ೧೨ ಜನ ಅಭ್ಯರ್ಥಿಗಳನ್ನು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಗೆಲ್ಲಿಸಿದ್ದಾರೆ ಬೆಳಗಾವಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

ಹಚ್ಚಿನ ಸ್ಥಾನ ಗೆಲ್ಲಿಸಿದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಬಹುಮತ ಬಂದಿದೆ ಅಂತ ಜೆಡಿಎಸ್  ನಿರ್ಲಕ್ಷ್ಯ ‌ಮಾಡಲ್ಲ ಎಂದರು.  ಚುನಾವಣೆಯಲ್ಲಿ ಹಣದ ಹೊಳೆ ವಿಚಾರವಾಗಿ ಮಾತನಾಡಲು ಬಿಎಸ್ವೈ ನಕಾರ ಸೂಚಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ:  ಪ್ರದೀಪ್ ಶೆಟ್ಟರ್ ಆರಿಸಿ ಬಂದಿದ್ದಾರೆ ಮತದಾರರಿಗೆ ಧನ್ಯವಾದ ಹೇಳ್ತೇನೆ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದ್ದೇವೆ ಕಳೆದ ಬಾರಿ ೬ ಸ್ಥಾನ ಮಾತ್ರ ಗೆದ್ದಿದ್ದೆವು

ಈ‌ ಬಾರಿ ೬ ಹೆಚ್ಚುವರಿ ಸ್ಥಾನ ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ನಾಯಕರು ವಿತಂಡವಾದ ಮಾಡ್ತಾರೆ ೧೨ ರಿಂದ ೧೧ ಕ್ಕೆ ಕುಸಿದಿದ್ದಾರೆ ನಾವು ೬ ರಿಂದ ೧೨ ಕ್ಕೆ ಜಿಗಿದಿದ್ದೇವೆ ಜನರ ಬೆಂಬಲ ನಮಗಿದೆ. ಮೈಸೂರಿನಲ್ಲೂ ಜನ ನಮ್ಮನ್ನ ಬೆಂಬಲಿಸಿದ್ದಾರೆ ಪಕ್ಷ ಇಡೀ ರಾಜ್ಯದಲ್ಲಿ ಫ್ರಂಟ್ ಲೈನ್ ನಲ್ಲಿದೆ. ಬೆಳಗಾವಿಯಲ್ಲಿ ನಮಗೆ ಹಿನ್ನಡೆಯಾಗಿದೆ. ನಮ್ಮ ಪಾರ್ಟಿ ಪೋರಂನಲ್ಲಿ ನಾವು ಚರ್ಚೆ ಮಾಡ್ತೇವೆ ಎಂದರು.

Share