Published
5 months agoon
ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್ ೧೫ (ಯು.ಎನ್.ಐ.) ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಸಮಾಧನ ತಂದಿದೆ. ಆದರೆ ಸಂಭ್ರಮ ಪಡುವ ಸಂಗತಿ ಅಲ್ಲ. ಇದು ನಮಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರುದರ್ಶಿ ಸಿ.ಟಿ. ರವಿ ಅಭಿಪ್ರಾಯಪಟ್ಟರು.
ಅವರಿಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಬೆಳಗಾವಿ ಹಾಗೂ ಮೈಸೂರಿನಲ್ಲಿ ಎರಡನೇ ಪ್ರಾಶಸ್ತ್ಯದಲ್ಲಿ ಸೋತಿರೋದು ಇದನ್ನ ಗಮನಿಸಬೇಕಾದ ಸಂಗತಿ. ಕಳೆದ ಬಾರಿ ಆರು ಸ್ಥಾನ ಗೆದ್ದಿದ್ವಿ ಈಗ ೧೧ ಸ್ಥಾನ ಗೆದ್ದಿದ್ದೆವು. ಇನ್ನು ಗೆಲ್ಲುವ ಅವಕಾಶವಿತ್ತು ಹೀಗಾಗಿ ಹೆಚ್ಚು ಸಂಭ್ರಮಿಸುವ ಸಮಯವಲ್ಲ ಎಂದರು.
ರಮೇಶ್ ಜಾರಕಿಹೊಳಿ ಮೇಲೆ ಧಮ್ ಇದ್ದರೆ ಕ್ರಮ ಜರುಗಿಲಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು, ಸಿದ್ದರಾಮಯ್ಯನವರಿಗೆ ನಿಮಗೆ ಧಮ್ ಇದ್ದಿದ್ರೆ ಚಾಮುಂಡೇಶ್ವರಿಯಲ್ಲಿ ಸೊಲುತ್ತಿದ್ರೆ ಎಂದು ಕೇಳಿದರೆ ಅವರಿಗೆ ನೋವಾಗುತ್ತದೆ. ಹೀಗಾಗಿ ನಾನು ಅದನ್ನ ಹೇಳೋಕೆ ಹೋಗಲ್ಲ ಎಂದು ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ೧೩ ವಿಧಾನ ಸಭೆ ಶಾಸಕರು, ಇಬ್ಬರು ಸಂಸದರು ಒಬ್ಬರು ರಾಜ್ಯಸಭಾ ಸದಸ್ಯರಿದ್ದರೂ ವಿಧಾನಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿಲ್ಲ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ರಮೇಶ್ ಜಾರಕಿಹೊಳಿ ಬಗ್ಗೆ ಸೇರಿದಂತೆ ಎಲ್ಲ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.
ಬಹುಮತ ಸಾಭೀತಿಗೆ ಲಖನ್ ಹಾಗೂ ಜೆಡಿಎಸ್ ಗೆ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ರಾಜಕಾರಣ ನಿಂತ ನೀರಲ್ಲ. ಯಾವ್ಯಾವ ಸಂದರ್ಭಕ್ಕೆ ಆಯಾ ಕಾಲಘಟ್ಟಕ್ಕೆ ಏನಾಗಬೇಕೋ ಅದನ್ನು ಮಾಡಬೇಕಾಗುತ್ತದೆ. ರಾಜಕೀಯದಲ್ಲಿ ಮರೆಯುವ ಗುಣವೂ ಇರಬೇಕು. ಜನಮತ ಸಂಪಾದನೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಮುಂಬುರವ ವಿಧಾನ ಸಭೆ ಚುನಾವಣೆ ಬಿಜೆಪಿಯ ಗುರಿಯಾಗಿದೆ. ಅದರ ಬಗ್ಗೆ ಪಕ್ಷ ಹೆಚ್ಚು ಗಮನ ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ವಿಧಾನಪರಿಷತ್ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಬಬುಲ್ ಸುಪ್ರಿಯೋ ಬಳಿಕ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಟಿಎಂಸಿ ಸೇರಿದ ಬಿಜೆಪಿ ಸಂಸದ
ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಜೈಲಿನಲ್ಲಿಡಲು ಬಯಸಿತ್ತು: ಸಿಎಂ ಕೇಜ್ರಿವಾಲ್
ರೈತರು ಸರ್ಕಾರಗಳನ್ನು ಉರುಳಿಸಬಹುದು: ಸಿಎಂ ಕೆಸಿಆರ್
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ