Published
5 months agoon
ಬೆಂಗಳೂರು: ಡಿಸೆಂಬರ್ (ಯು.ಎನ್.ಐ) ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮುನ್ನುಡಿಯೆಂತಲೇ ಬಿಂಬಿತವಾಗಿದ್ದ ಪ್ರತಿಷ್ಠೆಯ ಮೇಲ್ಮನೆ ಚುನಾವಣೆಯಲ್ಲಿ ಒಂದು ಸ್ಥಾನದ ಅಂತರದಿಂದ ಕೈ-ಕಮಲ ಹೆಚ್ಚಿನ ಬಲ-ಬೆಂಬಲಕ್ಕೆ ನಿರೀಕ್ಷಿಸುವಂತಾಗಿದೆ.
ವಿಧಾನಪರಿಷತ್ತಿನಲ್ಲಿ ಈ ಬಾರಿ ಅತಿಮುಖ್ಯವಾದ ವಿಧೇಯಕಗಳು ಜಾರಿಯಾಗಲು ಬಹುಮತ ಮುಖ್ಯ. ಹೀಗಾಗಿ ವಿಧೇಯಕ ಜಾರಿಗೂ ಮುನ್ನ ಬಹುಮತ, ಬಿಜೆಪಿಗೆ ಅವಶ್ಯಕವಿದ್ದರೆ ಸಮರ್ಥವಾಗಿ ವಿರೋಧಿಸಲು ಕಾಂಗ್ರೆಸ್ಗೆ ಅವಶ್ಯಕವಾಗಿದೆ.
ಒಟ್ಟು 75 ಸ್ಥಾನಗಳ ಮೇಲ್ಮನೆಯಲ್ಲಿ 25 ಸ್ಥಾನಗಳಿಗೆ ಈಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ 11 ಸ್ಥಾನ ಗೆದ್ದ ಬಿಜೆಪಿ ಮೇಲ್ಮನೆಯಲ್ಲಿ ಹೊಂದಿರುವ ಸದಸ್ಯರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಸರಳ ಬಹುಮತಕ್ಕೆ ಕೇವಲ ಒಂದು ಸ್ಥಾನ ಕಡಿಮೆಯಾಗಿದೆ. ಕಾಂಗ್ರೆಸ್ ಬಲ 26ಕ್ಕೆ ವೃದ್ಧಿಸಿದೆ. ಜೆಡಿಎಸ್ 11 ಸದಸ್ಯರನ್ನು ಹೊಂದಿದೆ. ಪಕ್ಷೇತರ ಸದಸ್ಯ ಎಂದು ಇರುವುದು ಲಖನ್ ಜಾರಕಿಹೊಳಿ ಮಾತ್ರ.
ಕಾಂಗ್ರೆಸ್ ಮೂರು ಸ್ಥಾನ ಕಳೆದುಕೊಂಡರೆ ಜೆಡಿಎಸ್ಗೆ ಎರಡು ಸ್ಥಾನಗಳು ನಷ್ಟವಾಗಿದೆ.ರಮೇಶ್ ಜಾರಕಿಹೊಳಿ ವತಿಯಿಂದ ಕಣಕ್ಕಿಳಿದು ಗೆದ್ದಿರುವ ಲಖನ್ ಜಾರಕಿಹೊಳಿ ಬೆಂಬಲ ಸಿಕ್ಕರೆ ಬಿಜೆಪಿಗೆ ಬಹುಮತ ದೊರೆಯುತ್ತದೆ ಎನ್ನಲಾಗಿದೆ. ಹೀಗೆ ಲಖನ್ ಬೆಂಬಲಕ್ಕೆ ಎರಡೂ ಕಡೆ ಪೈಪೋಟಿ ಇದೆ. ಒಂದುವೇಳೆ ಲಖನ್ ಬಿಜೆಪಿಗೆ ಬೆಂಬಲಿಸಬೇಕು ಎನ್ನುವುದಾದರೆ ಇದಕ್ಕಾಗಿ ಒಂದು ಸಚಿವ ಸ್ಥಾನದ ಬೇಡಿಕೆಯ ಷರತ್ತು ಬಿಜೆಪಿ ನಾಯಕರ ಮುಂದೆ ಹೋಗುವ ಸಾಧ್ಯತೆಯಿದೆ.
ಹಿಂದೆ ಮೇಲ್ಮನೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಸಭಾಪತಿ ಸ್ಥಾನ ಜೆಡಿಎಸ್ಗೂ ಉಪಸಭಾಪತಿ ಸ್ಥಾನ ಬಿಜೆಪಿಗೂ ಹೋಗಿತ್ತು ಎಂಬುದಿಲ್ಲಿ ಗಮನಾರ್ಹ. ಜೆಡಿಎಸ್ ಸದಸ್ಯ ಭೋಜೇಗೌಡ ಯಾವುದಾದರೊಂದು ಪಕ್ಷಕ್ಕೆ ಬೆಂಬಲ ಸೂಚಿಸಲೇಬೇಕೆಂದಿದ್ದಾರೆ. ಮೂಲವೊಂದರ ಪ್ರಕಾರ ಜೆಡಿಎಸ್ ಮೇಲ್ಮನೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸಲಿದೆ ಎನ್ನಲಾಗಿದೆ.
ಓವೈಸಿ.. ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ: ದೇವೇಂದ್ರ ಫಡ್ನವೀಸ್
ಕೇಜ್ರಿವಾಲ್, ಶರದ್ ಪವಾರ್ ಮೇಲೆ ಸಚಿವ ಧರ್ಮೇಂದ್ರ ಪ್ರಧಾನ್ ‘ಕಪಾಳಮೋಕ್ಷ’
ದೆಹಲಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ; ಸ್ವತಂತ್ರ ಭಾರತದ ದೊಡ್ಡ ವಿನಾಶ ಎಂದ ಕೇಜ್ರಿವಾಲ್
ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲವೇ ; ಹೆಚ್ಡಿಕೆ ಪ್ರಶ್ನೆ
ರಾಷ್ಟ್ರವನ್ನು ದಾರಿತಪ್ಪಿಸುವ ನಕಲಿ ಹಿಂದುತ್ವ ಪಕ್ಷವಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದ ನಟಿಯ ಬಂಧನ