Published
6 months agoon
By
UNI Kannadaಬೆಂಗಳೂರು: ಜನೆವರಿ.05 (ಯು.ಎನ್.ಐ) ವಿಧಾನ ಪರಿಷತ್ ಹಾಗೂ ವಿಧಾನ ಪರಿಷತ್ ಸದಸ್ಯರ ಕಾರ್ಯಗಳ ಬಗ್ಗೆ ಸಿಂಹಾವಲೋಕನ ಆಗತ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ನಡೆದ ನಿವೃತ್ತ ಮೇಲ್ಮನೆ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಧಾನ ಪರಿಷತ್ ಡ್ಯೂಯಲ್ ಕ್ಯಾಮೆರಾ ಸಿಸ್ಟಮ್ನಂತೆ. ವಿಧಾನ ಪರಿಷತ್ ಗೆ ದಿವ್ಯ ಪರಂಪರೆ ಇದೆ. ಮಹತ್ವದ ಚರ್ಚೆ ಆಗಿದೆ.ಈ ಬಾರಿ ಸದನದಲ್ಲಿ 7-8ದಿನಗಳು ವಿಶ್ವವಿದ್ಯಾಲಯದ ಬಿಲ್ ಬಗ್ಗೆ ಚರ್ಚೆ, ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿವೆ ಎಂದರು.
ವಿವಿಧ ಕ್ಷೇತ್ರದ ಪ್ರಮುಖರು ವಿಧಾನ ಪರಿಷತ್ಗೆ ಆಯ್ಕೆಯಾಗಿ ಬಂದು ತಮ್ಮ ಅನುಭವಗಳನ್ನು ಇಲ್ಲಿ ಧಾರೆ ಎರೆಯುತ್ತಾರೆ. ಹಲವಾರು ಸಂಧರ್ಭದಲ್ಲಿ ವಿಧಾನ ಪರಿಷತ್ ಬೇಕೇ? ಎಂಬುದರ ಬಗ್ಗೆ ಚರ್ಚೆ ಆಗುತ್ತದೆ. ರಾಜಕಾರಣಕ್ಕೆ ನಿವೃತ್ತಿ, ವಿದ್ಯಾರ್ಹತೆ ಇಲ್ಲ, ಇಂದು ನಿವೃತ್ತರಾಗ್ತಿರುವವರನ್ನು ನಿವೃತ್ತಿ ಎಂದು ಪರಿಗಣಿಸಲಾಗದು. ರಾಜಕಾರಣದಲ್ಲಿ ರಿಲವೆಂಟ್ ಆಗಿರುವುದು ಮುಖ್ಯ. ಕ್ರಿಯಾಶೀಲತೆಯಿಂದ ಮಾತ್ರ ರಾಜಕಾರಣದಲ್ಲಿ ಬೇರೆಬೇರೆ ಆಯಾಮಗಳಿಂದ ಪುನರಾಯ್ಕೆ ಆಗಲು ಸಾಧ್ಯವಿದೆ. ವಿಧಾನ ಪರಿಷತ್ನಲ್ಲಿ ವಿಧಾನ ಸಭೆಗೆ ಆಯ್ಕೆ ಆಗುವಂತೆ ಜನರ ಹೃದಯದಲ್ಲಿ ಸ್ಥಾನ ಗಳಿಸುವುದೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಿಎಂ ಮಾರ್ಮಿಕವಾಗಿ ನುಡಿದರು.
ನಾನೂ ಕೂಡ ವಿಧಾನ ಪರಿಷತ್ ಸದಸ್ಯನಾಗಿದ್ದವನು. ನಾವು ಹೋದಾಗ ಹಂಗೆ ಹೋಗಿದ್ದು, ಈ ರೀತಿ ಕಾರ್ಯಕ್ರಮ ಮಾಡಿರಲಿಲ್ಲ.ಆಗಿನ ಸಭಾಪತಿಯವರಿಗೆ ಈ ರೀತಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಬೇಕು ಎಂದೆನಿಸಿರಲಿಲ್ಲ ಎಂದು ಸೂಚ್ಯವಾಗಿ ಸಿಎಂ ಹೇಳಿದರು.
ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು; ಶಿಂಧೆ ಬಣ ಸೇರಿದ ಮತ್ತೊಬ್ಬ ಮಿನಿಸ್ಟರ್
ಮಹಾರಾಷ್ಟ್ರ ಸರ್ಕಾರದಲ್ಲಿ ಬಿಕ್ಕಟ್ಟು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂಧೆ ಟೀಂ
ಲೋಕಸಭೆ ಉಪಚುನಾವಣೆ; ಅಖಿಲೇಶ್ ಯಾದವ್ ಗೆ ಮುಖಭಂಗ, ಅರಳಿದ ‘ಕಮಲ’
ಶಿವಸೇನೆ ಬಂಡಾಯ ನಾಯಕರಿಗೆ ಭದ್ರತೆ ಒದಗಿಸಿ: ಮಹಾರಾಷ್ಟ್ರ ರಾಜ್ಯಪಾಲರು
ನೀವು ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? …ಉಪಸ್ಪೀಕರ್ ಫೋಟೋ ಜೊತೆ ರೆಬೆಲ್ಸ್ ಗೆ ಶಿವಸೇನೆ ಸಂದೇಶ
ನಿಮಗೆ ಧೈರ್ಯವಿದ್ದರೆ ಶಿವಸೇನೆ ಪಕ್ಷ ತೊರೆದು ಚುನಾವಣೆ ಎದುರಿಸಿ: ರೆಬೆಲ್ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು