Published
2 months agoon
By
Vanitha Jainಬೆಂಗಳೂರು: ಜೂನ್ 24 (ಯು.ಎನ್.ಐ.) ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಲಹರಿ ಯೂಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಅನುಮಾನ ಈ ಟ್ರೇಲರ್ ಹುಟ್ಟುಹಾಕಿದೆ.
ಆ ಊರೇ ಒಂದು ಥರ ವಿಚಿತ್ರವಾಗಿತ್ತು. ಆ ಊರಿನ ಜನ ಯಾವುದೋ ಭಯಾನಕ ಕಥೆನಾ ಮುಚ್ಚಿಡೋಕೆ ನೋಡ್ತಾ ಇದ್ರು. ಕಥೆನಾ ಮುಚ್ಚಿಡ್ಬೋದು, ಭಯ ಅಲ್ಲ ಎಂದು ತೆರೆದುಕೊಳ್ಳುವ ಟ್ರೇಲರ್ ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕೊಂಡೊಯ್ಯಲಿದೆ. ಹಾಗಾದರೆ ಆ ಪ್ರಪಂಚ ಯಾವುದು ಅಂತಾ ತಿಳಿದುಕೊಳ್ಳೋಕೆ ಜುಲೈ ೨೮ರವರೆಗೆ ಕಾಯಲೇಬೇಕಾಗಿದೆ.
೩ಡಿ ಸಿನಿಮಾವಾದ ವಿಕ್ರಾಂತ್ ರೋಣ ಜುಲೈ 28ರಂದು ಬಿಡುಗಡೆಯಾಗಲಿದೆ. ಈಗಾಗಲೇ ವಿಶ್ವದ ಅತಿ ಎತ್ತರದ ಬುರ್ಜಾ ಖಲೀಫಾದ ಮೇಲೆ ಟೀಸರ್ ಬಿಡುಗಡೆ ಮಾಡಿ ಎಲ್ಲರ ನಿರೀಕ್ಷೆ ಹೆಚ್ಚಿಸಿತ್ತು ಈ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ಅನೂಪ್ ಭಂಡಾರಿ ನಟಿಸಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದಾರೆ.
ಈ ಸಿನಿಮಾವನ್ನು ಜೀ ಸ್ಟುಡಿಯೊಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ನಡಿ ನಿರ್ಮಾಪಕ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತವಿದೆ. ಇನ್ನು ಟ್ರೇಲರ್ ಬಿಡುಗಡೆಯಾದ ಒಂದು ದಿನದೊಳಗೆ ೫೩ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಸಿನಿಮಾವು ಕನ್ನಡ, ಇಂಗ್ಲೀಷ್, ತಮಿಳು ತೆಲುಗು, ಹಿಂದಿ ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈ ಎಲ್ಲಾ ಭಾಷೆಗಳಲ್ಲಿ ಸುದೀಪ್ ಅವರೇ ಡಬ್ಬಿಂಗ್ ಮಾಡಿರುವುದೇ ವಿಶೇಷ.
‘ಕಾಂತಾರ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್
ಪಡ್ಡೆಹೈದರ ಎದೆಬಡಿತ ಹೆಚ್ಚಿಸಿದ ಅನಿಖಾ ಸುರೇಂದ್ರನ್ ಇಚ್ಛೆ !
‘ಅವಳು ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ಯಾರಿಗೆ?
ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದವ 2 ದಿನ ಪೊಲೀಸ್ ಕಸ್ಟಡಿಗೆ
ನಟ ರಣವೀರ್ ಸಿಂಗ್ ನಗ್ನ ಫೋಟೋಗಳು ವೈರಲ್, ಎಫ್ಐಆರ್ ದಾಖಲು
ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಮೋಷನ್ ಪೋಸ್ಟರ್ ಬಿಡುಗಡೆ;