Connect with us


      




ಸಿನೆಮಾ

ಫೆಬ್ರವರಿಗೆ ಸುದೀಪ್ ಅಭಿಮಾನಿಗಳಿಗೆ ರಸದೌತಣ, ವಿಕ್ರಾಂತ್ ರೋಣ ರಿಲೀಸ್ ಡೇಟ್ ಫಿಕ್ಸ್

Vanitha Jain

Published

on

ಬೆಂಗಳೂರು, ಡಿಸೆಂಬರ್ 7, (ಯು.ಎನ್.ಐ): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ ಮಂಗಳವಾರ ಘೋಷಣೆಯಾಗಿದೆ.

ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವು 2022ರ ಫೆಬ್ರವರಿ 24ಕ್ಕೆ ಬಿಡುಗಡೆಯಾಗಲಿದ್ದು, ಸುದೀಪ್ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಈ ಸಿನಿಮಾ ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ಈ ಐದು ಭಾಷೆಗಳಿಗೂ ಸುದೀಪ್ ಅವರೇ ಡಬ್ಬಿಂಗ್ ಮಾಡಿರುವುದು ವಿಶೇಷ.

ದುಬೈನಲ್ಲಿರುವ ವಿಶ್ವವಿಖ್ಯಾತ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಈ ಸಿನಿಮಾ ಟೀಸರ್ ಬಿಡುಗಡೆಯಾಗಿ ವಿಶ್ವದ ಜನರ ಗಮನಸೆಳೆದಿದ್ದು, ಎಂದಿನಂತೆ ಇದ್ದಿದ್ದರೆ ಈ ಸಿನಿಮಾವು 2020ರ ಆಗಸ್ಟ್19 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಎಲ್ಲಾ ಸಿನಿಮಾಗಳು ಮುಂದೂಡಿದಂತೆ ಈ ಸಿನಿಮಾವು ಮುಂದೂಡಲ್ಪಟ್ಟು, ಮುಂದಿನ ಫೆಬ್ರವರಿಗೆ ತೆರೆಗೆ ಬರಲು ಸಜ್ಜಾಗಿದೆ.

ಖುದ್ದಾಗಿ ಸುದೀಪ್ ಅವರೇ ಈ ಸಿನಿಮಾದ ಬಗ್ಗೆ ಟ್ವಿಟರ್‍ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ಜಾಕ್ ಮಂಜು ಈ ಸಿನಿಮಾದ ನಿರ್ಮಾಪಕರಾಗಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದರ್ಪಣೆ ಮಾಡಲಿದ್ದಾರೆ.

Continue Reading
Share