Connect with us


      




ಸಾಮಾನ್ಯ

ಆರ್‌ಸಿಬಿ ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾದ ಕೊಹ್ಲಿ

UNI Kannada

Published

on

ಬೆಂಗಳೂರು : ಫೆಬ್ರವರಿ 01 (ಯು.ಎನ್.ಐ.) ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿನೂತನ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ತಂಡದ ಕೆಲವು ಹಳೆಯ ಸದಸ್ಯರೊಂದಿಗೆ ಪಾಡ್‌ಕ್ಯಾಸ್ಟ್ ಕಾರ್ಯಕ್ರಮವನ್ನು ಆಯೋಜಿಸಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಂಡದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಲೀಗ್‌ನ ಮೊದಲ ಸೀಸನ್‌ನಲ್ಲಿ (2008) ತಂಡಕ್ಕೆ ಆಯ್ಕೆಯಾದ ಭಾವನಾತ್ಮಕ ಕ್ಷಣಗಳನ್ನು ನೆನಪಿಸಿಕೊಂಡರು. ಐಪಿಎಲ್ ಮೊದಲ ಹರಾಜಿನ ವೇಳೆ ಅಂಡರ್ 19 ವಿಶ್ವಕಪ್ ಗಾಗಿ ಮಲೇಷ್ಯಾದಲ್ಲಿದ್ದರಂತೆ, ಬೆಂಗಳೂರು ಜೊತೆಗೆ ಡೆಲ್ಲಿ ಫ್ರಾಂಚೈಸಿ ನನ್ನನ್ನ ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಸ್ಪರ್ಧಿಸಿದ್ದನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದು ಭಾವುಕರಾದರು.

ಅಂದು ಹರಾಜಿನಲ್ಲಿ ಬೆಂಗಳೂರು ತಂಡ ಸುಮಾರು ರೂ. 25 ಲಕ್ಷ ($ 30,000) ಕೊಟ್ಟು ನನ್ನನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಮತ್ತು RCB ತನಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತದೆ ಎಂದು ಊಹಿಸಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ, ಆ ಸಮಯದಲ್ಲಿ ಅವರು ಕೈ ತುಂಬಾ ಹಣವನ್ನು ಕಂಡು ಕ್ರೇಝಿಯಾಗಿದ್ದೆ ಎಂದು ತಿಳಿಸಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿದ ದಿನ ನನಗೆ ಇನ್ನೂ ನೆನಪಿದೆ, ಟೀಂ ಇಂಡಿಯಾ ಪರ ಆಡುವುದರಿಂದ ಆಗುವ ಆರ್ಥಿಕ ಲಾಭದ ಬಗ್ಗೆ ಆಗ ತಿಳಿಯಿತು . ಅಂದು ಡೆಲ್ಲಿ ಫ್ರಾಂಚೈಸಿ ಕೂಡ ಅವರಿಗಾಗಿ ಪೈಪೋಟಿ ನಡೆಸಿದ್ದರೂ, ಕೊನೆಗೆ ಡೆಲ್ಲಿ ತಂಡಕ್ಕೆ ಬೌಲರ್‌ಗಳು ಬೇಕಾಗಿದ್ದರಿಂದ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ನೆನಪಿಸಿಕೊಂಡರು.

ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಸೀಸನ್‌ನಿಂದ ಆರ್‌ಸಿಬಿ ಹೊರತುಪಡಿಸಿ ಬೇರೆ ಯಾವುದೇ ತಂಡವನ್ನು ಪ್ರತಿನಿಧಿಸಲಿಲ್ಲ. ಕೊಹ್ಲಿ 2008 ರಿಂದ 2012 ರವರೆಗೆ ಆರ್‌ಸಿಬಿಯಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರೆದರು. ಅವರು 2013 ರಿಂದ 2021 ರ ಸೀಸನ್ ವರೆಗೆ ತಂಡದ ನಾಯಕರಾಗಿದ್ದರು. ಕಳೆದ ಸೀಸನ್ ನಲ್ಲಿ ಕೋಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

 

Share