Published
7 months agoon
ಹೊಸದಿಲ್ಲಿ : ಜನೆವರಿ 15 (ಯು.ಎನ್.ಐ.) ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಒಂದು ದಿನದ ಬಳಿಕ ವಿರಾಟ್ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಏಕಾಏಕಿ ಟೆಸ್ಟ್ ತಂಡದ ನಾಯಕತ್ವ ತ್ಯಜಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ವಿರಾಟ್ ಕೊಹ್ಲಿ, ಈ ರಾಜೀನಾಮೆ ಬಳಿಕ ಯಾವುದೇ ಸ್ವರೂಪದ ನಾಯಕರಾಗಿ ಉಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಕನಾಗಿ ವಿರಾಟ್ ಅವರ ಟೆಸ್ಟ್ ವೃತ್ತಿಜೀವನದ ಕೆಲವು ಸಾಧನೆಗಳು ಮತ್ತು ದಾಖಲೆಗಳನ್ನು ನೋಡೋಣ.
ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕರಾಗಿದ್ದವ್ರು. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 68 ಪಂದ್ಯಗಳಲ್ಲಿ 40 ಗೆಲುವು ದಾಖಲಿಸಿ 17ರಲ್ಲಿ ಸೋಲು ಕಂಡಿದೆ. ಈ ಅವಧಿಯಲ್ಲಿ ತಂಡವು 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ವಿರಾಟ್ ಅವರ ಗೆಲುವಿನ ಶೇಕಡಾವಾರು 58.82 ಮಾಜಿ ನಾಯಕರಾದ ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಗಿಂತ ಹೆಚ್ಚಿನ ಪ್ರಮಾಣದ್ದಾಗಿದೆ.
ಭಾರತದ ಅಗ್ರ ಐದು ಟೆಸ್ಟ್ ನಾಯಕರು
ನಾಯಕ ಅವಧಿ ಪಂದ್ಯ ಜಯ ಸೋಲು ಡ್ರಾ
ವಿರಾಟ್ ಕೊಹ್ಲಿ 2014-22 68 40 17 11
ಧೋನಿ 2008-14 60 27 18 15
ಗಂಗೂಲಿ 2000-05 49 21 13 15
ಅಜರುದ್ದೀನ್ 1990-99 47 14 14 19
ಗವಾಸ್ಕರ್ 1976-85 47 9 8 30
ನಾಯಕನಾಗಿ ವಿರಾಟ್ ಬ್ಯಾಟಿಂಗ್ ದಾಖಲೆ
ನಾಯಕನಾಗಿ ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಏರುಪೇರು ಕಂಡ್ರೂ ವಿರಾಟ್ ಕೊಹ್ಲಿ, 113 ಇನ್ನಿಂಗ್ಸ್ಗಳಲ್ಲಿ 54.80 ಸರಾಸರಿಯಲ್ಲಿ 5,864 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 20 ಶತಕ ಮತ್ತು 18 ಅರ್ಧ ಶತಕಗಳನ್ನು ಗಳಿಸಿದರು.
ಅತಿ ಹೆಚ್ಚು ಟೆಸ್ಟ್ಗಳಲ್ಲಿ ಭಾರತವನ್ನು ಮುನ್ನಡೆಸಿದ ಕ್ರಿಕೆಟಿಗರು
ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿರುವ ವಿಚಾರದಲ್ಲಿ ಭಾರತದಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನ ಹೊಂದಿದ್ದರೆ, ವಿಶ್ವದ ಇತರ ಕ್ರೀಕೆಟ್ ತಂಡಗಳ ಹೋಲಿಕೆಯಲ್ಲಿ ಆರನೇ ಸ್ಥಾನದಲ್ಲಿ ಆಸೀನರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್, ನ್ಯೂಜಿಲೆಂಡ್ನ ಸ್ಟೀಫನ್ ಫ್ಲೆಮಿಂಗ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟ್ ಇಂಡೀಸ್ನ ಕ್ಲೈವ್ ಲಾಯ್ಡ್ ವಿರಾಟ್ ಕೊಹ್ಲಿಗಿಂತ ಮುಂದೆ ಇದ್ದಾರೆ.
ನಾಯಕನಾಗಿ ಹೆಚ್ಚಿನ ಟೆಸ್ಟ್ಗಳು
ನಾಯಕ ಅವಧಿ ಪಂದ್ಯ ಜಯ ಸೋಲು ಟೈ ಡ್ರಾ
ಗ್ರೇಮ್ ಸ್ಮಿತ್ 2003-14 109 53 29 0 27
ಅ ಬಾರ್ಡರ್ 1984-94 93 32 22 1 38
S ಫ್ಲೆಮಿಂಗ್ 1997-06 80 28 27 0 25
R ಪಾಂಟಿಂಗ್ 2004-10 77 48 16 0 13
ಕ್ಲೈವ್ ಲಾಯ್ಡ್ 1974-85 74 36 12 0 26
ವಿರಾಟ್ ಕೊಹ್ಲಿ 2014-22 68 40 17 0 11
ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಲ್ಲಿ ಕೊಹ್ಲಿ ನಾಲ್ಕನೇ ಸ್ಥಾನ
ನಾಯಕ ಅವಧಿ ಪಂದ್ಯ ಜಯ ಸೋಲು ಡ್ರಾ
ಗ್ರೇಮ್ ಸ್ಮಿತ್ 2003-14 109 53 29 27
R ಪಾಂಟಿಂಗ್ 2004-10 77 48 16 13
S ವಾ 1999-04 57 41 9 7
ವಿರಾಟ್ ಕೊಹ್ಲಿ 2014-22 68 40 17 11
ಕ್ಲೈವ್ ಲಾಯ್ಡ್ 1974-85 74 36 12 26
ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಭಾರತೀಯ ನಾಯಕ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ 2018 ರ ಪ್ರವಾಸದಲ್ಲಿ ಮೊದಲು ವಾಂಡರರ್ಸ್ ಟೆಸ್ಟ್ ಗೆದ್ದಿತು ಮತ್ತು 2021ರಲ್ಲಿ ಇತ್ತೀಚೆಗೆ ಸೆಂಚುರಿಯನ್ನಲ್ಲಿ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ.
ಬರ್ಮಿಂಗ್ಹ್ಯಾಮ್ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ!
ರಿಲಯನ್ಸ್ ; ಎರಡು ಹೊಸ ತಂಡಗಳ ಹೆಸರು, ಬ್ರಾಂಡ್ ಗುರುತು ಅನಾವರಣ
ಕಾಮನ್ವೆಲ್ತ್ ಗೇಮ್ಸ್: ಅಶ್ವಿನಿ ಪೊನ್ನಪ್ಪರಿಗೆ ರಾಜ್ಯ ಸರಕಾರದಿಂದ 15 ಲಕ್ಷ ನಗದು ಪುರಸ್ಕಾರ
ಕಾಮನ್ ವೆಲ್ತ್ ಗೇಮ್ಸ್; ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತಕ್ಕೆ ಚಿನ್ನ, ಟೇಬಲ್ ಟೆನ್ನಿಸ್ ನಲ್ಲಿ ಸ್ವರ್ಣದ ಜೊತೆಗೆ ಕಂಚು
ಕಾಮನ್ ವೆಲ್ತ್ ಗೇಮ್ಸ್; ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಲಕ್ಷ್ಯಸೇನ್, ಭಾರತಕ್ಕೆ 20 ಚಿನ್ನ
ಕಾಮನ್ ವೆಲ್ತ್ ಗೇಮ್ಸ್; ಚಿನ್ನದ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು