Connect with us


      




ಕ್ರೀಡೆ

ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್ ಆಗಲಿರುವ ವಿವಿಎಸ್ ಲಕ್ಷ್ಮಣ್

Lakshmi Vijaya

Published

on

ನವದೆಹಲಿ: ಮೇ 18 (ಯು.ಎನ್.ಐ.) ಭಾರತದ ಮಾಜಿ ಕ್ರಿಕೆಟಿಗ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ 20 ಪಂದ್ಯಗಳನ್ನಾಡುವ ಭಾರತ ತಂಡದ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.  ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಥಾನವನ್ನ ಭರ್ತಿ ಮಾಡಲಿದ್ದಾರೆ.

ಪ್ರಸ್ತುತ ಕನ್ನಡಿಗ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ.  ಸದ್ಯ ಅವರು ಅವರು ಮರು ನಿಗದಿಪಡಿಸಿದ ಪಂದ್ಯಗಳ ಭಾಗವಾಗಿ ಭಾರತ ತಂಡದ ಕೋಚ್ ಆಗಿ ಇರಲಿದ್ದಾರೆ. ಜುಲೈ 1 ರಿಂದ ಜುಲೈ 5 ರವರೆಗೆ ಬರ್ಮಿಂಗ್ಹ್ಯಾಮ್‌ನ ಎಡ್ಜ್ ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ.

ಈಗಾಗಲೇ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಕೋವಿಡ್ 19 ಏಕಾಏಕಿ ಸಂಭವಿಸಿದ ಕಾರಣ ಅಂತಿಮ ಟೆಸ್ಟ್ ಅನ್ನು ರದ್ದುಗೊಳಿಸಬೇಕಾಯಿತು. ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು 2022 ರಲ್ಲಿ ಐದನೇ ಟೆಸ್ಟ್ ಆಡಲು ನಿರ್ಧರಿಸಿದ್ದವು. ಈ ಪಂದ್ಯದಲ್ಲಿ ಒಂದು ಗೆಲುವು ಅಥವಾ ಡ್ರಾವು 2007 ರ ನಂತರ ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಮೊದಲ ಸರಣಿ ಜಯವನ್ನು ನೀಡುತ್ತದೆ. ಆ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕರಾಗಿದ್ದರು.

ಇದಕ್ಕೂ ಮೊದಲು ಜೂನ್ 24- 27ರವರೆಗೆ ಇಂಗ್ಲಿಷ್ ಕೌಂಟಿ ತಂಡ ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಭಾರತ ಆಡಲಿದೆ.

ಜೂನ್ 9 ರಿಂದ 19 ರವರೆಗೆ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಆಡಲಿದ್ದು, ನಂತರ  ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯವಾಡಲಿದೆ. ಈ ಪಂದ್ಯಗಳಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಟೆಸ್ಟ್ ತಂಡದಲ್ಲಿದ್ದಾಗ ಅವರ ಸ್ಥಾನವನ್ನ ದ್ರಾವಿಡ್ ಇದೇ ರೀತಿ ತುಂಬಿದ್ದರು.  ದ್ರಾವಿಡ್ ಆ ಸಮಯದಲ್ಲಿ ಶ್ರೀಲಂಕಾದ ಸೀಮಿತ ಓವರ್‌ಗಳ ಪ್ರವಾಸದಲ್ಲಿ ಯುವ ಭಾರತೀಯ ತಂಡಕ್ಕೆ ತರಬೇತಿ ನೀಡಿದ್ದರು.

Share