Published
6 months agoon
By
UNI Kannadaಮುಂಬೈ,ಜನವರಿ 10(ಯು.ಎನ್.ಐ) ದೇಶದ ಆರ್ಥಿಕ ರಾಜಧಾನಿ ಮುಂಬೈ ದೇಶದಲ್ಲಿ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳ ಕಾರ್ಯಾರಂಭದೊಂದಿಗೆ ಹೊಸ ಸಾರಿಗೆ ಪರಿಹಾರವನ್ನು ಪಡೆಯಲು ಸಿದ್ಧವಾಗಿದೆ.
ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಈ ಸೇವೆ ಪ್ರಾರಂಭವಾಗಬಹುದೆನ್ನಲಾಗಿದೆ.
ಈ ಸೇವೆಯು ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್ನಲ್ಲಿರುವ ಕ್ರೂಸರ್ ಟರ್ಮಿನಲ್ನೊಂದಿಗೆ ಸಂಪರ್ಕ ಹೊಂದಿದೆ. ಇನ್ನು ಈ ವಾಟರ್ ಟ್ಯಾಕ್ಸಿಯಿಂದ ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ.
ಈ ಯೋಜನೆಗೆ ಸಂಬಂಧಿಸಿದ ಇನ್ಫಿನಿಟಿ ಹಾರ್ಬರ್ ಸರ್ವಿಸಸ್, ವಾಟರ್ ಟ್ಯಾಕ್ಸಿಯಲ್ಲಿ ಏಕಮುಖ ಪ್ರಯಾಣದ ವೆಚ್ಚವು ರೂ 200 ರಿಂದ ರೂ 700 ರ ನಡುವೆ ಇದೆಯಂತೆ. ಇದಲ್ಲದೇ ಮಾಸಿಕ ಪಾಸ್ಗಳ ವ್ಯವಸ್ಥೆಯು ಇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಾಂತ್ಯದೊಳಗೆ ಈ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡುವ ಸಾಧ್ಯತೆಯಿದೆ.
ವಾಟರ್ ಟ್ಯಾಕ್ಸಿಗಳು ಸಂಚರಿಸುವ ಮಾರ್ಗಗಳು:
ವರದಿ ಪ್ರಕಾರ ಕೆಲವು ನಿರ್ವಾಹಕರಿಗೆ ಮಾರ್ಗಗಳನ್ನು ಮುಂಬೈ ಸರಕಾರ ಮಂಜೂರು ಮಾಡಿದೆ. ಇದು ಎಲಿಫೆಂಟಾದಿಂದ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ನಿಂದ ರೇವಾಸ್, ಧರ್ಮತಾರ್, ಕರಂಜಾಡೆ, ಬೇಲಾಪುರ್, ನೆರೂಲ್, ಐರೋಲಿ, ವಾಶಿ, ಖಂಡೇರಿ ದ್ವೀಪಗಳು ಮತ್ತು ಜವಾಹರಲಾಲ್ ನೆಹರು ಬಂದರಿಗೆ ದೇಶೀಯ ಕ್ರೂಸ್ ಟರ್ಮಿನಲ್ಗಳನ್ನು ಒಳಗೊಂಡಿದೆ.
ಸಾರ್ವಜನಿಕ ರೈಲುಗಳ ಲೋಡ್ ಕಡಿಮೆಯಾಗಲಿದ್ದು, ಹೊಸ ಸೇವೆ ಆರಂಭವಾದ ಬಳಿಕ ಸ್ಥಳೀಯ ರೈಲುಗಳ ಹೊರೆ ಕಡಿಮೆಯಾಗಲಿದೆ ಎಂದು ಇನ್ಫಿನಿಟಿ ಹಾರ್ಬರ್ ಕಂಪನಿ ತಿಳಿಸಿದೆ. ಅಲ್ಲದೆ, ಈ ಸೇವೆಯು ಎಲ್ಲಾ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಮುಂಬೈ ಮತ್ತು ನವಿ ಮುಂಬೈ ನಡುವೆ ರಸ್ತೆ ಮತ್ತು ರೈಲು ಮಾತ್ರ ಸಾರಿಗೆ ವಿಧಾನವಾಗಿದೆ.ಇದು ರಸ್ತೆ ಮತ್ತು ರೈಲು ಹೊರತುಪಡಿಸಿ ಮುಂಬೈ ಮತ್ತು ನವಿ ಮುಂಬೈ ನಡುವೆ ಚಲಿಸುವ ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣದ ವಿಧಾನವನ್ನು ಒದಗಿಸಲಿದೆ.ವಾಟರ್ ಟ್ಯಾಕ್ಸಿಗಳು ಸುಮಾರು 30 ಕಿ.ಮೀ ದೂರದ ಪ್ರಯಾಣವನ್ನು ಕಡಿಮೆ ಮಾಡಲು ಇದು 2,5 ನಿಮಿಷಗಳನ್ನು ತೆಗೆದುಕೊಳ್ಳಲಿದೆ.
ಒಂದು ಬಾರಿಗೆ 50 ಜನರು ಪ್ರಯಾಣಿಸಲು ಸಾಧ್ಯವಾಗುವ ಈ ವಾಟರ್ ಟ್ಯಾಕ್ಸಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇದರಲ್ಲಿ ಸುರಕ್ಷತೆಗೂ ವಿಶೇಷ ಗಮನ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಲೈಫ್ ಜಾಕೆಟ್ ನೀಡಲಾಗುವುದು. ಈ ವಾಟರ್ ಟ್ಯಾಕ್ಸಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು ಈ ವಾಟರ್ ಟ್ಯಾಕ್ಸಿ ಹಡಗಿನಲ್ಲಿ ಯಾವಾಗಲೂ ಭದ್ರತಾ ಸಿಬ್ಬಂದಿ ಇರಲಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!