Connect with us


      
ಕರ್ನಾಟಕ

ನಾವು ಹಲಾಲ್ ಮಾಂಸ ತಿಂದ್ಬಿಟ್ಟಿದ್ದೇವೆ ನಮ್ಮನ್ನ ಬಹಿಷ್ಕಾರ ಮಾಡ್ತಾರಾ? ಎಚ್‌ಡಿಕೆ

Iranna Anchatageri

Published

on

ಬೆಂಗಳೂರು: ಮಾರ್ಚ್ 31 (ಯು.ಎನ್.ಐ.) ಹಿಜಾಬ್, ಹಲಾಲ್, ಜಟ್ಕಾ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಸಿ.ಎಂ.ಇಬ್ರಾಹಿಂ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂದು ಬಾಬರಿ ಮಸೀದಿ ಒಡೆಯಲಾಗಿತ್ತು. ಇಂದು ದೇಶದಲ್ಲಿ ಇರುವ ಸನ್ನಿವೇಶ ಹೋಲಿಕೆಯಾಗುತ್ತಿದೆ. ಇದು ಬಿಜೆಪಿ ಉಂಟು ಮಾಡಿರುವ ವಾತಾವರಣ. ಇಂದು ನಾಡಿನ ಸಾಮರಸ್ಯ ಹಾಳು ಮಾಡುವಂಥ ಕೆಲಸ ಬಿಜೆಪಿ‌ ಮಾಡುತ್ತಿದೆ. ಹಿಜಾಬ್ ಆಯ್ತು, ವ್ಯಾಪಾರ ಮಾಡಬೇಡಿ, ಈಗ ಹಲಾಲ್… ಇದು ದೇಶದ ಬೇರೆಡೆ ಯಾಕೆ ಇಂಥ ಸನ್ನಿವೇಶಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಮಾತ್ರ ಯಾಕೆ ಇಂಥ ಘಟನೆಗಳು ನಡೆಯುತ್ತಿವೆ ಎಂದು ಪ್ರಶ್ನೆ ಮಾಡಿದ ಅವರು, ರಾಜಕೀಯಕ್ಕಾಗಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದರು. ಭಜರಂಗದಳ, ಹಿಂದೂ ಪರಿಷತ್ ಹುಡುಗರನ್ನ ಇಟ್ಕೊಂಡು ಏನ್ ಮಾಡ್ತಾಯಿದ್ದಾರೆ. 94ರಲ್ಲಿ ಇದೇ ರೀತಿ.. ಈಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡಿದ್ದೇನೆ. ನಾನು ಸಿಎಂಗೆ ಈ ಕುರಿತು ಪತ್ರ ಬರೆಯುತ್ತೇನೆ ಎಂದು ತಿಳಿಸಿದರು. ಭಜರಂಗದಳ ಹುಡುಗರನ್ನ ಇಟ್ಕೊಂಡು ಜಟ್ಕಾ ಅಂತ ಇದ್ದಾರೆ. ಜಟ್ಕಾ ಮಾಂಸ ತಿಂದು ಜಟ್ಕಾ ಓಡಿಸೋಕ್ಕೆ ಹೋಗಬೇಕಾಗುತ್ತೆ. ಜಟ್ಕಾ ಮಾಂಸ ತಿನ್ನಿಸೋಕ್ಕೆ ಹೋಗ್ತಾಯಿದ್ದಾರೆ. ಜಟ್ಕಾ ಮಾಂಸ ತಿನ್ನಿಸಿ ರೈತರ ಬಾಳು ಹಾಳು ಮಾಡಲು ಹೊರಟ್ಟಿದ್ದಾರೆ. ಕರ್ನಾಟಕವನ್ನ ಉತ್ತರ ಪ್ರದೇಶ ಮಾಡಲು ಬಿಡಲ್ಲ.. ಮತ್ತೊಂದು ಸ್ವಾತಂತ್ರ್ಯ ಹೋರಾಟ ಆರಂಭ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಕಿರಣ್ ಮಜುಂದಾರ್ ಶಾ ಟ್ವೀಟ್ ಗೆ ಅಭಿನಂಧಿಸಿದ ಅವರು, ನಾವು ಕೂಡ ಹಲಾಲ್ ಮಾಂಸ ತಿಂದುಬಿಟ್ಟಿದ್ದೇವೆ. ನಮ್ಮನ್ನ ಕೂಡ ಬಹಿಷ್ಕಾರ ಮಾಡ್ತಾರಾ? ಕೋಟ್ಯಂತರ ಜನ ತಿಂದಿದ್ದಾರೆ. ಅವರೆನ್ನೆಲ್ಲಾ ಬಹಿಷ್ಕಾರ ಮಾಡ್ತೀರಾ? ಇವೆಲ್ಲಾ ಇಲ್ಲಿ ವರ್ಕೌಟ್ ಆಗಲ್ಲ. ಟಿಪ್ಪು ಇದ್ದ ಕಾಲದಲ್ಲಿ ಎಷ್ಟು ಜನಸಂಖ್ಯೆ ಇತ್ತು. 70 ಸಾವಿರ ಜನರನ್ನ ಕೊಡಗಿನಲ್ಲಿ ಸಾಯಿಸಿಬಿಟ್ಟ ಅಂತ ಹೇಳ್ತಾಯಿದ್ದಾರೆ. ಆದ್ರೆ ಅಂದು ಇಷ್ಟೊಂದು ಜನಸಂಖ್ಯೆಯೇ ಇರಲಿಲ್ಲ. ಟಿಪ್ಪು ವಿಚಾರವನ್ನ ಕಾಂಗ್ರೆಸ್ ನವರು ತಂದ್ರು.. ನಂತರ ಬೀದಿಗೆ ಬಿಟ್ಟು ಹೋದ್ರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಅವಧಿ ಪೂರ್ವ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಗೆಲ್ಲುವ ವಾತಾವರಣ ಏನೂ ಇಲ್ಲ. ಹಿಜಾಬ್ ಹಲಾಲ್ ಇಟ್ಕೊಂಡು ಬರ್ತಾಯಿದ್ದಾರೆ. ಇದನ್ನೆಲ್ಲಾ ಜನ ನೋಡ್ತಾ ಇರ್ತಾರೆ. ಕಾಶ್ಮೀರಿ ಸಿನಿಮಾ ನೋಡಿ ವೋಟ್ ಹಾಕ್ತಾರಾ? ಭಜರಂಗಿ ಭಾಯಿಜಾನ್ ಸಿನಿಮಾ ನೋಡಿ ಯಾಕೆ ವೋಟ್ ಹಾಕಲ್ಲ ಎಂದು ಪ್ರಶ್ನಿಸಿದರು.

ಇನ್ನು ಸಿಎಂ ಇಬ್ರಾಹಿ ಕುರಿತು ಮಾತನಾಡಿದ ಅವರು, ಇಂದು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಸಹೋದರನಂತೆ ಇರುವ ನಾಯಕ. ಮಧ್ಯೆದಲ್ಲಿ‌ ಸಣ್ಣ ಭಿನ್ನಾಭಿಪ್ರಾಯದಿಂದ ದೂರ ಆಗಿದ್ದರು. 1994ರಲ್ಲಿ ಜನತಾದಳಕ್ಕೆ ಸೇರ್ಪಡೆಯಾಗಿದ್ದರು. ಇಬ್ರಾಹಿಂ ಜನತಾದಳದ ಪ್ರಾಡೆಕ್ಟ್. ಅವರ ರಾಜಕೀಯ ಜೀವನ ಕಾಕತಾಳೀಯ. ರಾಜ್ಯದ ಉದ್ದಗಲ್ಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು. ಅಂದು ಸ್ವತಂತ್ರ ಅಧಿಕಾರ ಸಿಕ್ಕಿತ್ತು. ದೇವೇಗೌಡರು ಸಿಎಂ ಆಗಿದ್ದರು, ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದರು. ಈಗ ಮನೆಗೆ ಮರಳಿ ಬರ್ತಾಯಿದ್ದಾರೆ.

ರಾಜ್ಯದಲ್ಲಿ ಸ್ವತಂತ್ರ ಅಧಿಕಾರ ತರುವಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಕಡೆ ರಂಜಾನ್, ಮತ್ತೊಂದು ಕಡೆ ಯುಗಾದಿ. ಇದಾದ ಬಳಿಕ ಜನತಾ ಜಲಧಾರೆ ನಡೆಸುತ್ತೇವೆ. ಇದರ ಜವಾಬ್ದಾರಿ ಇಬ್ರಾಹಿಂ ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

Share