Connect with us


      




ಕ್ರೀಡೆ

109 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ವೇಯ್ಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್, ಗಣ್ಯರ ಶುಭಾಶಯ

Vanitha Jain

Published

on

ಬರ್ಮಿಂಗ್ ಹ್ಯಾಮ್: ಆಗಸ್ಟ್ 03 (ಯು.ಎನ್.ಐ.) ಕಾಮನ್ ವೆಲ್ತ್ ಗೆಮ್ಸ್ ೨೦೨೨ರ ಪುರುಷರ 109 ಕೆಜಿ ತೂಕ ವಿಭಾಗದಲ್ಲಿ ಭಾರತದ ವೇಯ್ಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತದ ತೆಕ್ಕೆಗೆ 14 ಪದಕ ಬಂದಂತಾಗಿದೆ.

ಲವ್‌ಪ್ರೀತ್ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಲವ್‌ಪ್ರೀತ್ ಗೆ ಇದು ಮೊದಲ ಪದಕವೂ ಹೌದು. ಕಳೆದ ವರ್ಷ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಸ್ನ್ಯಾಚ್‌ನಲ್ಲಿ 163 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 192 ಕೆಜಿ ಎತ್ತಿದರು. ಲವ್‌ಪ್ರೀತ್ ಸಿಂಗ್ ಅವರ ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗುರುಪ್ರೀತ್ ಸಿಂಗ್ ನಿತೀನ್ ಗಡ್ಕರಿ ಶುಭಹಾರೈಸಿದ್ದಾರೆ.

ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಪ್ರತಿಭಾವಂತ ಲವ್‌ಪ್ರೀತ್ ಸಿಂಗ್‌ಗೆ ಅಭಿನಂದನೆಗಳು. ಯುವ ಮತ್ತು ಕ್ರಿಯಾತ್ಮಕ ಲವ್‌ಪ್ರೀತ್ ತನ್ನ ಶಾಂತ ಸ್ವಭಾವ ಮತ್ತು ಕ್ರೀಡೆಯಲ್ಲಿನ ಸಮರ್ಪಣೆಯಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ.

ಭಾರತಕ್ಕೆ ಮತ್ತೊಂದು ವೇಟ್ ಲಿಫ್ಟಿಂಗ್ ಪದಕ! ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 109 ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ಎತ್ತಿ ಹಿಡಿದಿದ್ದಾರೆ ನಮ್ಮ ಅಥ್ಲೀಟ್‌ಗಳು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ!

ಟೀಂ ಇಂಡಿಯಾಗೆ ಮತ್ತೊಂದು ವೇಟ್ ಲಿಫ್ಟಿಂಗ್ ಪದಕ!!! ಕಾಮನ್‌ವೆಲ್ತ್ ಗೇಮ್ಸ್‌2022 ರಲ್ಲಿ 109kg ವೇಟ್‌ಲಿಫ್ಟಿಂಗ್‌ನಲ್ಲಿ #ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಲವ್‌ಪ್ರೀತ್ ಸಿಂಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

Continue Reading
Click to comment

Leave a Reply

Your email address will not be published.

Share