Published
5 months agoon
By
Vanitha Jainಕೊಲ್ಕತ್ತಾ, ಡಿಸೆಂಬರ್ 10(ಯು.ಎನ್.ಐ): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ನಡೆಯ ಮೇಲೆ ರಾಜ್ಯಪಾಲ ಜಗದೀಪ್ ದಂಖರ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತಮ ನಿದರ್ಶನ ಎಂದು ಆರೋಪಿಸಿದರು.
ಮಾನವ ಹಕ್ಕುಗಳ ದಿನದಂದು ವಿಡಿಯೋ ಕಾಲ್ನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರಲು ಜನರ ಹಕ್ಕುಗಳನ್ನು ಎತ್ತಿಹಿಡಿಯುವುದು ಮುಖ್ಯವಾಗಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳವು ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತಮ ನಿದರ್ಶನವಾಗಿದೆ. ತಮ್ಮ ಹಕ್ಕುಗಳ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಜನರಿಗೆ ಈಗಲೂ ಭಯವಿದೆ ಎಂದು ಹೇಳಿದರು.
2019ರಲ್ಲಿ ಜುಲೈ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರಕ್ಕೂ ದಂಖರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ. ರಾಜ್ಯದಲ್ಲಿ ಆಡಳಿತಾಧಿಕಾರಿಗಳು ರಾಜಕಿಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಆಡಳಿತವು ಸಂವಿಧಾನ ಮತ್ತು ಕಾನೂನು ನಿಯಮದಿಂದ ದೂರವಿದೆ ಎಂದ ರಾಜ್ಯಪಾಲರು ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರು.
ಮಮತಾ ಬ್ಯಾನರ್ಜಿ ಅವರು ಮೂಲಭೂತ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳನ್ನು ಸೋಲಿಸಲು ಜನರು ಒಗ್ಗಟ್ಟಿನಲ್ಲಿರಬೇಕು ಎಂದು ಟ್ವೀಟ್ ಮೂಲಕ ಸಂದೇಶ ಸಾರಿದರು.
“ದ್ವೇಷ ಮತ್ತು ಅಸಮಾನತೆ ತೊಡೆದುಹಾಕಿ ಉನ್ನತ ಮಟ್ಟಕ್ಕೆ ಏರುವ ಪ್ರತಿಜ್ಞೆ ಮಾಡೋಣ. ನಾವು ಒಗ್ಗೂಡಿ ಪರಸ್ಪರ ಹೋರಾಡೋಣ, ಒಬ್ಬರಿಗೊಬ್ಬರು ಸಾಥ್ ನೀಡೋಣ. ಆಗ ಮಾತ್ರ ನಮ್ಮ ಮೂಲಭೂತ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ಶಕ್ತಿಗಳನ್ನು ನಾವು ಸೋಲಿಸಬಹುದು, ”ಎಂದು ಅವರು ಬರೆದಿದ್ದಾರೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ