Connect with us


      




ಕ್ರೀಡೆ

ವೆಸ್ಟ್ ಇಂಡೀಸ್ ತಂಡ ಪ್ರಕಟ; ಕೆಮರ್ ರೋಚ್‌ಗೆ ಬುಲಾವ್!

Iranna Anchatageri

Published

on

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ಫೆಬ್ರುವರಿ 6 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಕೆಮರ್ ರೋಚ್, ಎನ್ಕ್ರುಮಾ ಬೋನರ್ ಮತ್ತು ಬ್ರಾಂಡನ್ ಕಿಂಗ್ ಅವರನ್ನು ಮರಳಿ ಕರೆ ತರಲಾಗಿದೆ. ಆದರೆ, ವೆಸ್ಟ್ ಇಂಡೀಸ್ ಇನ್ನೂ ತನ್ನ ಟಿ20 ತಂಡವನ್ನು ಪ್ರಕಟಿಸಿಲ್ಲ. ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಕೀರನ್ ಪೊಲಾರ್ಡ್ ವಹಿಸಿದ್ದಾರೆ. ಇದಕ್ಕೂ ಮುನ್ನ ಭಾರತ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ತಂಡವನ್ನು ಪ್ರಕಟಿಸಿತ್ತು.

ಎರಡು ವರ್ಷಗಳ ಬಳಿಕ ಕೆಮರ್ ರೋಚ್ ಆಗಮನ

ವೆಸ್ಟ್ ಇಂಡೀಸ್ ಪರ 92 ಏಕದಿನ ಪಂದ್ಯಗಳಲ್ಲಿ 124 ವಿಕೆಟ್ ಗಳನ್ನು ಪಡೆದಿರುವ ವೇಗದ ಬೌಲರ್ ಕೆಮರ್ ರೋಚ್, 2019ರ ಆಗಸ್ಟ್ ನಲ್ಲಿ ಭಾರತದ ವಿರುದ್ಧ ಕೊನೆಯ ಒಡಿಐ ಪಂದ್ಯ ಆಡಿದ್ದರು. ಈ ಸರಣಿಯ ನಂತರ ರೋಚ್ ಟೆಸ್ಟ್ ತಂಡದ ಭಾಗವಾಗಿದ್ದರಿಂದ ಅವರಿಗೆ ODIಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೇ ರೀತಿ ಆರಂಭಿಕ ಬ್ಯಾಟ್ಸ್‌ಮನ್ ಬ್ರಾಂಡನ್ ಕಿಂಗ್ ಅವರನ್ನು ಭಾರತದ ವಿರುದ್ಧದ ಸರಣಿಗೆ ಬುಲಾವ್ ನೀಡಲಾಗಿದೆ. ಬ್ರಾಂಡನ್ ಕಿಂಗ್ ಅವರು ಟಿ20 ಮಾದರಿಯಲ್ಲಿ ವೆಸ್ಟ್ ಇಂಡೀಸ್ ಪರ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ.

ಫೆಬ್ರವರಿ 6 ರಿಂದ ಪ್ರಾರಂಭವಾಗುವ ODI ಸರಣಿಗಾಗಿ, ವೆಸ್ಟ್ ಇಂಡೀಸ್ ಕೂಡ ತಮ್ಮ ತಂಡದಲ್ಲಿ ಯುವ ಆಟಗಾರರೊಂದಿಗೆ ಅನುಭವಕ್ಕೆ ಆದ್ಯತೆ ನೀಡಿದೆ. ಡ್ಯಾರೆನ್ ಬ್ರಾವೋ, ಕೋಮರ್ ರೋಚ್, ಕಿರೊಣ್ ಪೊಲಾರ್ಡ್, ಜೇಸನ್ ಹೋಲ್ಡರ್ ಜೊತೆಗೆ ಯುವ ಆಟಗಾರರಾದ ಹೇಡನ್ ವಾಲ್ಷ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್‌ಗೆ ಅವಕಾಶ ಸಿಕ್ಕಿದೆ.

ತಂಡ: ಕಿರೊನ್ ಪೊಲಾರ್ಡ್ (ನಾಯಕ), ಕೆಮರ್ ರೋಚ್, ನ್ಕ್ರುಮಾ ಬೊನ್ನರ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ವಾಲ್ಶ್ ಜೆರ್, ಓಡಿಯನ್ ಸ್ಮಿತ್.

Share