Connect with us


      




ಆರೋಗ್ಯ

‘ಸಿಕಲ್ ಸೆಲ್‌ ಅನೀಮಿಯಾ’ ಇರುವ ದಂಪತಿ ಮಕ್ಕಳು ಪಡೆಯಬಹುದು! ಹೇಗೆ ಅಂತಿರಾ? ಇಲ್ಲಿದೆ ಪರಿಹಾರ

Vanitha Jain

Published

on

ಬೆಂಗಳೂರು: ಏಪ್ರಿಲ್ 04 (ಯು.ಎನ್‌.ಐ.) ಸಿಕಲ್ ಸೆಲ್‌ ಅನೀಮಿಯಾ ಒಂದು ಆನುವಂಶಿಕ ರಕ್ತಸಂಬಂಧಿ ಕಾಯಿಲೆ. ಈ ಸಮಸ್ಯೆ ಇರುವ ವ್ಯಕ್ತಿಗಳು ಮಕ್ಕಳನ್ನು ಹೊಂದಿದರೆ ಮಕ್ಕಳಿಗೂ ಈ ಕಾಯಿಲೆ ವರ್ಗವಾಗಬಹುದು. ಹಾಗಿದ್ದರೆ ಈ ಸಮಸ್ಯೆ ಉಳ್ಳ ದಂಪತಿ ಮಗು ಹೊಂದುವ ಆಸೆ ಕೈಬಿಡಬೇಕಿಲ್ಲ. ಇದಕ್ಕೆ ಬೆಂಗಳೂರಿನ ಗುಣಶೀಲ ಆಸ್ಪತ್ರೆಯಲ್ಲಿ ಆನುವಂಶಿಕ ರೋಗನಿರ್ಣಯ ಪರಿಶೀಲನೆ ನಡೆಸಿ ಮೂಲಕ ಆರೋಗ್ಯವಂತ ನವಜಾತ ಶಿಶು ಪಡೆಯುವ ಪ್ರಯೋಗ ಇತ್ತೀಚೆಗೆ ಯಶಸ್ವಿಯಾಗಿದೆ.

ಸಮಸ್ಯೆ ಏನು?

ಸರಳವಾಗಿ ಹೇಳುವುದಾದರೆ ರಕ್ತ ಸಂಬಂಧಿ ಸಮಸ್ಯೆ. ದುಂಡಗಿರಬೇಕಾದ ರಕ್ತಕಣಗಳು ಕುಡುಗೋಲಿನ ಆಕಾರ ಹೊಂದಿರುತ್ತವೆ. ಇಂಥ ಅಸಹಜತೆ ಇಡೀ ದೇಹದ ಮೇಲೆ ಪರಿಣಾಮ ಬೀರಿ ಯಾತನೆ ಸೃಷ್ಟಿಸುತ್ತದೆ. ಅನುವಂಶಿಕ ರೋಗನಿರ್ಣಯ ಮಾಡಿ, ಚಿಕಿತ್ಸೆ ಪಡೆದರೆ ನವಜಾತ ಶಿಶುವು ರೋಗ ಮುಕ್ತವಾಗಬಹುದು ಎನ್ನುತ್ತಾರೆ ಗುಣಶೀಲ ಆಸ್ಪತ್ರೆಯ ತಜ್ಞರು.

ಈ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಯಿಂದ ಫಲವತ್ತತೆಗೆ ಒಳಗಾದ 8 ಭ್ರೂಣಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆ ಪೈಕಿ ನಾಲ್ಕು ಭ್ರೂಣಗಳನ್ನು ವಂಶವಾಹಿ ತಪಾಸಣೆಗೆ (ಪ್ರಿ ಇಂಪ್ಲಾಂಟೇಷನ್‌ ಜೆನೆಟಿಕ್ ಸ್ಕ್ರೀನಿಂಗ್ ಗೆ) ಒಳಪಡಿಸಲಾಯಿತು. ಈ ನಾಲ್ಕು ಭ್ರೂಣಗಳ ಪೈಕಿ ಮೂರರಲ್ಲಿ ಸಿಕಲ್ ಸೆಲ್‌ ಅನೀಮಿಯಾದ ಅಂಶಗಳು ಪತ್ತೆಯಾದವು. ಒಂದು ಭ್ರೂಣ ಯಾವುದೇ ವಂಶವಾಹಿ ಸಮಸ್ಯೆಗಳಿಲ್ಲದೇ ಸಂಪೂರ್ಣ ಆರೋಗ್ಯಕರವಾಗಿತ್ತು. ಆ ಭ್ರೂಣವನ್ನು ಗರ್ಭದಲ್ಲಿ ಅಳವಡಿಸಲಾಯಿತು. ಇತ್ತೀಚೆಗೆ ಆ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಈ ಸಮಸ್ಯೆ ಉಳ್ಳವರು ಮಗು ಹೊಂದಲು ಸಾಧ್ಯ. ಗರಿಷ್ಠ ನಾಲ್ಕು ಬಾರಿ ಪ್ರಯತ್ನಿಸಬಹುದು.

ರೋಗದ ಮೂಲ ಯಾವುದು?

ಸಿಕಲ್ ಸೆಲ್‌ ಅನೀಮಿಯಾ ಆನುವಂಶಿಕವಾಗಿ ಬರುವ ಕಾಯಿಲೆ. ಭ್ರೂಣವು ದಂಪತಿಯಿಂದ ಅಸಹಜ ಸ್ಥಿತಿಯ ವಂಶವಾಹಿಗಳನ್ನು ಪಡೆದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. 1910ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಈ ಕಾಯಿಲೆ ಪತ್ತೆಯಾಯಿತು.

ಗುಣಶೀಲ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ರಾಜಶೇಖರ ನಾಯಕ್ ಪ್ರಕಾರ, ‘ಸಿಕಲ್ ಸೆಲ್ ಅನೀಮಿಯಾ ಈಗ ಜಾಗತಿಕ ಮಹತ್ವ ಪಡೆದ ಕಾಯಿಲೆ. ಭಾರತ, ಆಫ್ರಿಕಾದ ಸಹರಾ ಪ್ರದೇಶ, ಮಧ್ಯಪ್ರಾಚ್ಯ, ಕೆರಿಬಿಯನ್, ದಕ್ಷಿಣ ಮತ್ತು ಮಧ್ಯ ಅಮೇರಿಕಾ ಮತ್ತು ಮೆಡಿಟರೇನಿಯನ್ ಸಮುದ್ರ ತೀರದ ಪ್ರದೇಶಗಳಲ್ಲಿ ಈ ಕಾಯಿಲೆ ಹೆಚ್ಚು ಇದೆ. ನಮ್ಮ ದೇಶದಲ್ಲಿ ಶೇ 40ರಷ್ಟು ಬುಡಕಟ್ಟು ಸಮುದಾಯದವರಲ್ಲಿ ಈ ಸಮಸ್ಯೆಯಿದೆ ಎನ್ನುತ್ತಾರೆ.

ಮಹಾರಾಷ್ಟ್ರ, ಕೇರಳದ ವಯನಾಡ್ ಮತ್ತು ಗುಜರಾತ್, ತಮಿಳುನಾಡು, ಒರಿಸ್ಸಾ ಮತ್ತು ಕರ್ನಾಟಕದಂತಹ ಇತರ ರಾಜ್ಯಗಳಲ್ಲಿಯೂ ಈ ಸಮಸ್ಯೆ ಇದೆ. ವೈದ್ಯರು ಹೇಳುವಂತೆ ಈ ನೋವಿನ ತೀವ್ರತೆ ಅಪ್ಪಟ ನರಕಯಾತನೆ. ನೋವು ಹೊಟ್ಟೆಯಲ್ಲಿ ಹೆಚ್ಚು ಕಂಡುಬರುತ್ತದೆ. ಶ್ವಾಸಕೋಶಗಳು, ಕಿಬ್ಬೊಟ್ಟೆಯ ಅಂಗಗಳು, ಮೂತ್ರಪಿಂಡಗಳು, ಇತ್ಯಾದಿ ಸೇರಿದಂತೆ ದೇಹದ ಯಾವುದೇ ಅಂಗಗಳಲ್ಲಿ ಕಂಡುಬರಬಹುದು.

ಮಕ್ಕಳಲ್ಲಿ, ಸಾಮಾನ್ಯವಾಗಿ ಕೈ ಮತ್ತು ಪಾದಗಳಲ್ಲಿ ‘ಹ್ಯಾಂಡ್-ಫೂಟ್ ಸಿಂಡ್ರೋಮ್’ ಎಂದು ಕರೆಯಲ್ಪಡುತ್ತವೆ ಮತ್ತು ವಿರೂಪಗೊಂಡ ಮೂಳೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ತೀವ್ರವಾದ ಬಹು-ಅಂಗ ವೈಫಲ್ಯ, ಪ್ಲೇಟ್‌ಲೆಟ್ ಪ್ರಮಾಣದಲ್ಲಿ ಕುಸಿತ ಸೇರಿದಂತೆ ಕೊನೆಗೆ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಈ ಕಾಯಿಲೆಗೆ ಒಳಗಾವದರ ಸರಾಸರಿ ಆಯಸ್ಸು ಪುರುಷರಾದರೆ 42, ಮಹಿಳೆಯರಾದರೆ 48 ವರ್ಷ.

ಹೆಚ್ಚಿನ ಮಾಹಿತಿಗೆ ಗುಣಶೀಲ ಫರ್ಟಿಲಿಟಿ ಸೆಂಟರ್‌ ಬಸವನಗುಡಿ. ದೂರವಾಣಿ: 080 46462600 ಸಂಪರ್ಕಿಸಬಹುದು.

Share