Connect with us


      
ಗ್ಯಾಜೆಟ್‌

ಪಾನ್ ಇಂಡಿಯಾ ಮಾತಿಗೆ ಸಾಥ್ ನೀಡುತ್ತಿರುವ ಕೂ ಆಪ್‌ನ ಎಂಎಲ್ ಕೆ ಫೀಚರ್ ವಿಶೇಷತೆ ಏನು?

Vanitha Jain

Published

on

ಸದ್ಯ ಪಾನ್ ಇಂಡಿಯಾ ಸಿನಿಮಾಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ನಿಮ್ಮ ಮಾತು ಕೂಡ ಪಾನ್ ಇಂಡಿಯಾ ಜನರನ್ನು ತಲುಪುತ್ತದೆ ಎಂದಾದರೆ ಎಷ್ಟು ಚಂದ ಅಲ್ಲವಾ? ಹೌದು, ಅದು ಕೂಡ ಈಗ ಸಾಧ್ಯ.

ಇನ್ನೇನು ನಮ್ಮ ದೇಸಿ ಆಟ ಕಬ್ಬಡಿಯ ರಂಗು ಎಲ್ಲೆಡೆ ಹಬ್ಬಲಿದೆ. ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಸೆಹ್ರಾವತ್ ನಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸಿದರೂ ಅವರ ಮಾತೃಭಾಷೆ ಹಿಂದಿ. ಸಾಮಾಜಿಕ ಜಾಲತಾಣದಲ್ಲಿ ಅವರ ಮಾತು ಕನ್ನಡದಲ್ಲಿ ನೋಡಿ ಇಲ್ಲಿನ ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಂಭ್ರಮ. ಕನ್ನಡ ಅಷ್ಟೇ ಅಲ್ಲ ಅವರು ಒಂದೇ ಸಮಯದಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಮತ್ತು ಇಂಗ್ಲಿಷ್‌ನಲ್ಲಿ ಸಂವಹನ ನಡೆಸುತ್ತಿದ್ದಾರೆ.

ಇದು ಸಾಧ್ಯವಾಗಿರುವುದು ಕೂ ವೇದಿಕೆಯ ಒಂದು ವಿಶಿಷ್ಟ ಫೀಚರ್ ಬಹು-ಭಾಷಾ ಕೂ (MLK) ಮೂಲಕ. ಈ ಫೀಚರ್ ನಿಂದಾಗಿ ನಿಮ್ಮ ಬರಹ ಒಂಬತ್ತು ಇತರ ಭಾಷೆಗಳಿಗೆ ನೈಜ-ಸಮಯದ ಮೂಲ ಬರಹಕ್ಕೆ ಶೇ 90ರಷ್ಟು ನಿಖರತೆಯಲ್ಲಿ ಅನುವಾದಗೊಳ್ಳುತ್ತದೆ.

ಹೀಗಾಗಿ ಸೆಹ್ರಾವತ್ ಅವರಿಗೆ ಅಸನ್ಸೋಲ್‌ನಿಂದ ಅಹಮದಾಬಾದ್ ಮತ್ತು ಬಟಿಂಡಾದಿಂದ ಬೆಂಗಳೂರಿನವರೆಗೆ ಅಭಿಮಾನಿಗಳಿದ್ದು, MLK ಫೀಚರ್ ನಿಂದಾಗಿ ಅವರು ತಮ್ಮ ತಮ್ಮ ಭಾಷೆಯಲ್ಲಿಯೇ ಸೆಹ್ರಾವತ್ ಅವರ ಕೂ ಗಳನ್ನೂ ಪಡೆಯುತ್ತಿದ್ದಾರೆ. ಸೆಹ್ರಾವತ್ ಅವರು ಕೇವಲ ಒಂದು ಉದಾಹರಣೆ. ಈ MLK ಫೀಚರ್ ಮೂಲಕ ಅನೇಕರು ವಿವಿಧ ಭಾಷೆಯ ಜನರನ್ನು ತಲುಪುತ್ತಿದ್ದಾರೆ.

ಬಹು-ಭಾಷಾ ಡಿಜಿಟಲ್ ಅಭಿವ್ಯಕ್ತಿ

ಭಾರತದಲ್ಲಿ 467 ಮಿಲಿಯನ್ ಜನರು ವಿವಿಧ ಸಾಮಾಜಿಕ ಮಾಧ್ಯಮ ಬಳಸುತ್ತಿದ್ದು, ದಿನಕ್ಕೆ 2.36 ಗಂಟೆಗಳ ಕಾಲ ವೇದಿಕೆಗಳಲ್ಲಿ ಕಳೆಯುತ್ತಿದ್ದಾರೆ. ಆನ್‌ಲೈನ್ ಸಂಭಾಷಣೆಗಳು ಹೆಚ್ಚಾಗಿ ಇಂಗ್ಲಿಷ್ ನಲ್ಲಿಯೇ ಇರುತ್ತದೆ ಆದರೆ, ಶೇ. 90ರಷ್ಟು ಭಾರತೀಯರು ಸ್ಥಳೀಯ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೆಚ್ಚಾಗುತ್ತಿರುವ ಬಹು-ಭಾಷಾ ಸಾಮಾಜಿಕ ಮಾಧ್ಯಮಗಳು ಲಕ್ಷಾಂತರ ಮೊದಲ-ಬಾರಿ ಬಳಕೆದಾರರನ್ನು ಆಕರ್ಷಿಸಿದೆ. ಇದು ಸ್ಥಳೀಯ ಭಾಷೆ ಮಾತನಾಡುವವರನ್ನೂ ಒಳಗೊಂಡಿದೆ. ಇವರು ಈ ಮೊದಲು ಇಂಗ್ಲಿಷ್ ಪ್ರಧಾನವಾಗಿದ್ದ ವೇದಿಕೆಗಳಲ್ಲಿ ಕಳೆದುಹೋಗಿದ್ದೆವು ಎಂಬ ಭಾವವನ್ನು ಹೊಂದಿದ್ದವರು.

ಈ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಲು, ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸಂವಹನ ಮಾಡಲು ಮತ್ತು ತಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸುವ ಈಗ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ. ಜೊತೆಗೆ ಒಂದೇ ರೀತಿ ಆಸಕ್ತಿ ಇರುವ ಬೇರೆ ಬೇರೆ ಭಾಷೆಗಳ ಜನರೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸಲು ಸಹ ಎದುರು ನೋಡುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಅದು MLK ಯಾಗಿದೆ. ನೀವು ತುಂಬ ಖುಷಿಯಲ್ಲಿ ಮಾತನಾಡುವ ಭಾಷೆಯಲ್ಲಿಯೇ ದೇಶದಾದ್ಯಂತ ಇರುವ ಜನರೊಂದಿಗೆ ಸಂವಹನ ನಡೆಸಬಹುದಾಗಿದೆ. ನೀವು ಪೋಸ್ಟ್ ಮಾಡಬೇಕೆನ್ನುವ ವಿಷಯವನ್ನು ಕೇವಲ ಒಂದು ಕ್ಲಿಕ್ ಮೂಲಕ ಕೂ ವೇದಿಕೆಯಲ್ಲಿನ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದ ಮಾಡಬಹುದಾಗಿದೆ. ದೃಢವಾದ ಭಾಷಾ ತಂತ್ರಜ್ಞಾನಗಳಿಂದ ಬೆಂಬಲಿತವಾಗಿರುವುದರಿಂದ, ಅನುವಾದವು ಮೂಲ ವಿಷಯಕ್ಕೆ ಹೆಚ್ಚು ಹತ್ತಿರವಿರಲಿದೆ ಹಾಗು ಅದರ ಭಾವಾರ್ಥವನ್ನು ಉಳಿಸಿಕೊಂಡಿರಲಿದೆ.

ಬೆಂಗಾಲಿ ಮಾತನಾಡುವವರು ತಮಿಳು, ತೆಲುಗು ಮತ್ತು ಕನ್ನಡದವರೊಂದಿಗೆ ಸಂವಹನ ನಡೆಸಲು MLK ಬಳಸಿಕೊಂಡು ತಮ್ಮ ವಿಷಯವನ್ನು ಅವರ ಭಾಷೆಗೆ ಭಾಷಾಂತರಿಸಬಹುದಾಗಿದೆ. ಇದರಂತೆ ಇತರೆ ಸ್ಥಳೀಯ ಭಾಷೆಯ ಜನರು ತಾವು ಇಚ್ಚಿಸಿದ ಇತರೆ ಭಾಷೆಗಳ ಜನರೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಮಾತನಾಡಬಹುದು.

MLK ಮೂಲಕ ಶೇ. 30 ರಷ್ಟು ಸಂಭಾಷಣೆಗಳು

ಕೂನಲ್ಲಿನ ಸುಮಾರು ಶೇ. 30 ರಷ್ಟು ಸಂಭಾಷಣೆಗಳು MLK ಮೂಲಕ ನಡೆಯುತ್ತಿದೆ. , ಹಲವಾರು ಗಣ್ಯ ವ್ಯಕ್ತಿಗಳು (ಸೆಹ್ರಾವತ್‌ನಂತಹ) ತಮ್ಮ ಮಾತೃಭಾಷೆಯಲ್ಲಿ ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಈ ಫೀಚರ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಸೆಹ್ರಾವತ್ ಅವರು 109.2K ಫಾಲ್ಲೋರ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಭಾಷಾ ಜಗತ್ತಿಗೆ MLK

ಭಾರತದಂತೆಯೇ, ಪ್ರಪಂಚದ ಶೇ. 80 ರಷ್ಟು ಮಂದಿ ಸ್ಥಳೀಯ ಭಾಷೆಯನ್ನೇ ಮಾತನಾಡುತ್ತಾರೆ. ಯುರೋಪಿಯನ್, ಆಫ್ರಿಕನ್ ಅಥವಾ ಪ್ಯಾನ್-ಏಷ್ಯನ್ ಭಾಷೆಗಳನ್ನು ಮಾತನಾಡುವವರ ನಡುವೆ ಯಾವುದೇ ಅಡಚಣೆ ಇಲ್ಲದೆ ಸಂವಹನ ಸಾಧಿಸಲು, ಬಹು ಭಾಷಾ ಜಗತ್ತಿನ ಡಿಜಿಟಲ್ ಒಳಗೊಳ್ಳುವಿಕೆಯನ್ನು ಸಾಧಿಸಲು ಈ ಫೀಚರ್ ನೆರವಾಗಲಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ಭೌಗೋಳಿಕತೆಯ ಜನರು ಒಟ್ಟಿಗೆ ಸೇರುವ, ಅವರ ಮನದಾಳವನ್ನು ಹಂಚಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಸಂಭ್ರಮಿಸುವ ಸಾಮಾಜಿಕ ಮಾಧ್ಯಮವನ್ನು ಒಂದು ವಾಹಕವನಾಗಿ ಈ ಫೀಚರ್ ಬದಲಿಸಬಹುದಾಗಿದೆ.

Continue Reading
Click to comment

Leave a Reply

Your email address will not be published.

Share