Connect with us


      




ಆರೋಗ್ಯ

ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಪ್ರಯೋಜನವೇನು?

pratham

Published

on

ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಪ್ರಯೋಜನವೇನು?

ವಿಶೇಷ ವರದಿ, ಬಿಂದುಶ್ರೀ.ಎನ್​​

ಚಳಿಗಾಲ ಬಹುತೇಕ ಬಂದಿದ್ದು, ಈಗಾಗಲೇ ಮಾರುಕಟ್ಟೆಗೆ ನೆಲ್ಲಿಕಾಯಿ ಕೂಡ ಲಗ್ಗೆ ಇಟ್ಟಾಗಿದೆ. ಇದು ಅಕ್ಟೋಬರ್ ನಿಂದ ಜನವರಿ ತನಕವೂ ಬೆಳೆಯುತ್ತದೆ. ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುವ ನೆಲ್ಲಿಕಾಯಿಯಲ್ಲಿ, ವಿಟಮಿನ್ ಸಿ ಹೆಚ್ಚಾಗಿ ಇದೆ. 100 ಗ್ರಾಂ ಆಮ್ಲಾ (ನೆಲ್ಲಿಕಾಯಿ) ಯಲ್ಲಿ ಸುಮಾರು 700 ಗ್ರಾಂ ವಿಟಮಿನ್ ಸಿ ಇರುತ್ತದೆ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆಲ್ಲಿಕಾಯಿಯನ್ನು ತಿನ್ನುವುದು ಉತ್ತಮ. ಇದು ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದಲೇ ಹೆಸರುವಾಸಿಯಾಗಿದೆ. ಶೀತ, ಕೆಮ್ಮುಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು  ಸಹಾಯ ಮಾಡುತ್ತದೆ. ಅಲ್ಲದೇ ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳಿಂದಲೂ ದೂರವಿಡುತ್ತದೆ. ಕೂದಲು ಉದುರುವ ಸಮಸ್ಯೆಗೂ ಆಮ್ಲಾ ಉಪಯುಕ್ತವಾಗಿದೆ.

ಆಮ್ಲಾವನ್ನು ಆಯುರ್ವೇದದಲ್ಲಿ ಅಮಲಕಿ ಎಂದು ಕರೆಯಲಾಗುತ್ತದೆ. ಪ್ರಕೃತಿಯಲ್ಲಿ ದೊರೆಯುವ ಅತ್ಯಂತ ಶಕ್ತಿಶಾಲಿ ಹಣ್ಣುಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗುತ್ತದೆ. ಇದು ವಾತ, ಪಿತ್ತ ಮತ್ತು ಕಫವನ್ನು ತಡೆಯಲು ಸಹಾಯವಾಗುತ್ತದೆ. ಕ್ರೋಮಿಯಂನ ಹೆಚ್ಚಿನ ಅಂಶದಿಂದಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಸ್ಪೈಕ್ ಅನ್ನು ತಡೆಯುತ್ತದೆ. ತಾಜಾ ನೆಲ್ಲಿಕಾಯಿ ಸೇವನೆಯು ಇನ್ಸುಲಿನ್​​ನನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್​ನನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯಮಾಡುತ್ತದೆ. ಹೀಗಾಗಿ ಮಧುಮೇಹವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ನೆಲ್ಲಿಕಾಯಿಯ ಪ್ರಯೋಜನಗಳು:

1. ಚಳಿಗಾಲದಲ್ಲಿ ಕೆಲವರು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಹೆಚ್ಚಿನ ಪ್ರಮಾಣದ ಫೈಬರ್​ನನ್ನು ಹೊಂದಿರುವ ನೆಲ್ಲಿಕಾಯಿಯ ಸೇವನೆಯಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು.

2. ಕೂದಲು ಉದುರುವಿಕೆ, ಅಸಿಡಿಟಿ, ತೂಕ ನಷ್ಟ, ಜೀರ್ಣಕ್ರಿಯೆ ಸಮಸ್ಯೆ, ಥೈರಾಯ್ಡ್, ಮಧುಮೇಹ, ಕಣ್ಣಿನ ದೃಷ್ಟಿ ದೋಷ ಇಂತಹ ಕಾಯಿಲೆಗಳಿಗೆ ನೆಲ್ಲಿಕಾಯಿ ಹೇಳಿ ಮಾಡಿಸಿದ ಔಷಧಿಯಾಗಿದೆ.

3. ನೆಲ್ಲಿಕಾಯಿ ಕೆಲವೊಂದು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು. ಮೂಳೆಗಳು, ಹಲ್ಲುಗಳು ಮತ್ತು ಉಗುರುಗಳಿಗೆ ಪ್ರಮುಖವಾಗಿ ಕ್ಯಾಲ್ಸಿಯಂನ ಅಗತ್ಯವಿದೆ.

4.ನೈಸರ್ಗಿಕವಾಗಿ ನೀರಿನಾಂಶವನ್ನು ಹೊಂದಿರುವ ನೆಲ್ಲಿಕಾಯಿಯು ಮೂತ್ರವರ್ಧಕವಾಗಿದೆ. ಮೂತ್ರವಿಸರ್ಜನೆ ಹೆಚ್ಚಿನ ಸಲ ಆಗುವ ಕಾರಣದಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕುವುದು.

5.ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ ದಣಿವು ಆಯಾಸ ಕಡಿಮೆಯಾಗುತ್ತದೆ. ಬಾಯಿ ತುಂಬಾ ಸಿಹಿಸಿಹಿ ಅನುಭವವಾಗುತ್ತದೆ. ‌ನೆಲ್ಲಿಕಾಯಿ ಉಪ್ಪಿನ ಕಾಯಿ, ಚಟ್ನಿ, ತಂಬುಳಿ ಕೂಡ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ.

6.ಚಳಿಗಾಲದಲ್ಲಿ ಎದುರಾಗುವ ಸೀತ ನೆಲ್ಲಿಕಾಯಿ ಸೇವನೆಯಿಂದ ಕಡಿಮೆ ಆಗುತ್ತದೆ.

7.ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ – ವೈರಲ್ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದರಿಂದ ನಿಮ್ಮ ಚರ್ಮದ ಆರೈಕೆಗಾಗಿ ನೀವು ಅಗತ್ಯ ಪ್ರಮಾಣದಲ್ಲಿ ಇದರ ಸೇವನೆ ಮಾಡಬೇಕು.

ನೆಲ್ಲಿಕಾಯಿಯನ್ನು ಸೇವಿಸುವ ವಿಧಾನ:

1. ಪೌಡರ್: ನೀವು ಖಾಲಿ ಹೊಟ್ಟೆಯಲ್ಲಿ 1 ಟೀ ಸ್ಪೂನ್ ಜೇನುತುಪ್ಪ ಅಥವಾ ಬೆಚ್ಚಗಿನ ನೀರಿನೊಂದಿಗೆ ಬೆಳಗ್ಗೆ 1 ಟೀಸ್ಪೂನ್ ಆಮ್ಲಾ ಪುಡಿಯನ್ನು ತೆಗೆದುಕೊಳ್ಳಬಹುದು.

2. ಜ್ಯೂಸ್: 20 ಮಿಲಿ ನೆಲ್ಲಿಕಾಯಿ ಜ್ಯೂಸ್​​ನನ್ನು ಬೆಳಗ್ಗಿನ ಜಾವ ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದು ಸೂಕ್ತವಾಗಿದೆ.

3. ಚ್ಯವನಪ್ರಾಶ್: ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟವಾದ ಎರಡು ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ 1 ಟೀಸ್ಪೂನ್ ಚ್ಯವನಪ್ರಾಶ್ ಅನ್ನು ಸೇವಿಸಬಹುದು.

4. ಆಮ್ಲಾ ಮುರಬ್ಬ ಮತ್ತು ಉಪ್ಪಿನಕಾಯಿ: ನೀವು ಮಾರುಕಟ್ಟೆಯಲ್ಲಿ ದೊರೆಯುವ ತಾಜಾ ಆಮ್ಲಾಗಳೊಂದಿಗೆ ಈ ಚಳಿಗಾಲದಲ್ಲಿ ಆಮ್ಲಾ ಮುರಬ್ಬ ಅಥವಾ ಉಪ್ಪಿನಕಾಯಿಯನ್ನು ತಯಾರಿಸಬಹುದು.

6. ನೆಲ್ಲಿಕಾಯಿ ಕ್ಯಾಂಡಿ: ನೀವು ಆಮ್ಲಾವನ್ನು ತುಂಡುಗಳಾಗಿ ಕತ್ತರಿಸಿ ಬಿಸಿಲಿಗೆ ಒಣಗಿಸಬಹುದು. ಅದು ಸಾಕಷ್ಟು ಒಣಗಿದ ನಂತರ ನೀವು ಅವುಗಳನ್ನು ಪ್ರತಿದಿನ ಮಿಠಾಯಿಯಾಗಿ ತಿನ್ನಬಹುದು.

Share