Connect with us


      
ಸಿನೆಮಾ

ಲಾಲ್ ಸಿಂಗ್ ಚಡ್ಡಾ ಬಹಿಷ್ಕಾರದ ಬಗ್ಗೆ ಮಿಲಿಂದ್ ಸೋಮನ್ ಹೇಳಿದ್ದೇನು?

Lakshmi Vijaya

Published

on

ಮುಂಬೈ: ಆಗಸ್ಟ್ 03 (ಯು.ಎನ್.ಐ.) ನಟ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿರುವುದರ ಬಗ್ಗೆ ನಟ, ನಿರ್ಮಾಪಕ, ಮಾಡೆಲ್ ಮಿಲಿಂದ್ ಸೋಮನ್ ಹೇಳಿದ್ದೇನು ಗೊತ್ತಾ?

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಮಿಲಿಂದ್ ಸೋಮನ್ ಅವರ ಟ್ವೀಟ್ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದ ವಿವಾದಕ್ಕೆ ಸಂಬಂಧಿಸಿದಂತೆ ತೋರುತ್ತದೆ. “ಟ್ರೋಲ್‌ಗಳು ಉತ್ತಮ ಚಿತ್ರವನ್ನು ನಿಲ್ಲಿಸಲು ಸಾಧ್ಯವಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.

ಕರೀನಾ ಕಪೂರ್ ಸಹ-ನಟಿಯಾಗಿ ನಟಿಸಿರುವ ಅಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಟ್ರೋಲ್‌ಗಳನ್ನು ಎದುರಿಸುತ್ತಿದೆ. ಚಲನಚಿತ್ರವನ್ನು ಬಹಿಷ್ಕರಿಸುವ ಕರೆಗಳು ಕಳೆದ ವಾರದಿಂದ ಪ್ರತಿದಿನ ಟ್ವಿಟರ್ ಟ್ರೆಂಡ್ ನಲ್ಲಿದೆ.

ಚಲನಚಿತ್ರ ನಿರ್ಮಾಪಕ ರಾಹುಲ್ ಧೋಲಾಕಿಯಾ ಸಹ ಟ್ವೀಟ್ ಮಾಡಿದ್ದು,   “ಒಬ್ಬ ಚಿತ್ರತಂಡದ ಅಥವಾ ತಂಡದ ಸದಸ್ಯರ ಸಿದ್ಧಾಂತವು ಭಿನ್ನವಾಗಿರುವ ಕಾರಣದಿಂದ ಚಲನಚಿತ್ರವನ್ನು ಟ್ರೋಲ್ ಮಾಡುವುದು ಚಲನಚಿತ್ರವನ್ನು ನಿರ್ಮಿಸಲು ಶ್ರಮಿಸಿದ ಇತರ ನೂರಾರು ಜನರಿಗೆ ಅನ್ಯಾಯವಾದಂತೆ. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಚಿತ್ರದ ಯಶಸ್ಸಿನ ಮೇಲೆ ತಮ್ಮ ಭರವಸೆಯನ್ನು ಇಟ್ಟುಕೊಂಡಿದ್ದಾರೆ”. ಎಂದು ಚಿತ್ರವನ್ನು ಬಹಿಷ್ಕರಿಸಂದಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಚಲನಚಿತ್ರದ ವಿರುದ್ಧದ ಆರೋಪವು ಹಿಂದೂಫೋಬಿಕ್ ಎಂದು ಹೇಳಲಾಗುತ್ತದೆ.  2015 ರಲ್ಲಿ ಆಮಿರ್​ ಖಾನ್​ ಅವರು ‘ಅಸಹಿಷ್ಣುತೆ’ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ದೇಶ ತೊರೆಯಲು ತಮ್ಮ ಕುಟುಂಬ ನಿರ್ಧರಿಸಿದೆ ಎಂದು ಹೇಳಿದ್ದ ಮಾತಿಗೆ ಆಕ್ರೋಶಗೊಂಡಿರುವ ಸಿನಿ ಪ್ರಿಯರು  ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಪ್ರೀ ರಿಲೀಸ್ ಸಮಾರಂಭವೊಂದರಲ್ಲಿ ಮಾತನಾಡಿದ ಅಮೀರ್, ಬಹಿಷ್ಕಾರದ ಕರೆಗಳನ್ನು ಉದ್ದೇಶಿಸಿ ಮಾತನಾಡಿದರು. ನನಗೆ ದುಃಖವಾಗಿದೆ.  ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ಹಲವರು ನಂಬುತ್ತಾರೆ. ನಾನು ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಚಲನಚಿತ್ರಗಳನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಚಲನಚಿತ್ರಗಳನ್ನು ನೋಡಿ ಎಂದು ಅಮೀರ್ ಖಾನ್ ಹೇಳಿದರು.

ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ, ಟಾಮ್ ಹ್ಯಾಂಕ್ಸ್ ಹಿಟ್ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದ್ದು, ಅಮೀರ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಇದು ಹಲವಾರು ವಿಳಂಬಗಳ ನಂತರ ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿದೆ.

Share