Published
5 months agoon
By
Vanitha Jainಜಿನೀವಾ, ಡಿಸೆಂಬರ್ 15 (ಯು.ಎನ್.ಐ)ಕರೋನವೈರಸ್ ರೂಪಾಂತರದ ಒಮೈಕ್ರಾನ್ ಹಿಂದಿನ ತಳಿಗಳಿಗೆ ಹೋಲಿಸಿದರೆ ಬಹು ವೇಗವಾಗಿ ಹರಡುತ್ತಿದೆ ಮತ್ತು ಹೆಚ್ಚಿನ ದೇಶಗಳಲ್ಲಿ ಕಂಡುಬರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಒಮೈಕ್ರಾನ್ ಮೊದಲು ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದ್ದು, ಇದು ಕೋವಿಡ್-19 ಹೊಸ ರೂಪಾಂತರ ವೈರಸ್ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಘೋಷಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಜಿನೀವಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ಮಾತನಾಡಿ, “ಒಮೈಕ್ರಾನ್ ಪ್ರಕರಣಗಳು 77 ದೇಶಗಳಲ್ಲಿ ಈಗಾಗಲೇ ವರದಿಯಾಗಿವೆ. ಆದರೆ ಇನ್ನು ಹಲವು ದೇಶಗಳಲ್ಲಿ ಇನ್ನೂ ಪತ್ತೆಯಾಗಿಲ್ಲ. ಹಿಂದಿನ ಯಾವುದೇ ರೂಪಾಂತರಕ್ಕಿಂತ ಊಹಿಸದ ರೀತಿಯಲ್ಲಿ ಒಮೈಕ್ರಾನ್ ಹರಡುತ್ತಿದೆ. ಕೆಲವು ಜನರು ಒಮೈಕ್ರಾನ್ ಹಿಂದಿನ ರೂಪಾಂತರಗಳ ರೀತಿಯಲ್ಲಿ ವ್ಯಾಪಿಸುವುದಿಲ್ಲ ಎಂದು ನಿರ್ಲಕಷ್ಯ ವಹಿಸುತ್ತಿದ್ದಾರೆ ಎಂದು ಮುಖ್ಯಸ್ಥರು ವಿಷದಿಸಿದರು.
ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಒಮೈಕ್ರಾನ್ ಗಂಡಾಂತರದಿಂದ ಪಾರಾಗುವ ಬಗ್ಗೆ ಅರಿತಿದ್ದೇವೆ. ಆದರೂ ಒಮೈಕ್ರಾನ್ ಪಸರಿಸುವಿಕೆಯು ಮತ್ತೊಂದು ಉಲ್ಬಣಕ್ಕೆ ಕಾರಣವಾಗಬಹುದು ಎಂಬ ಆತಂಕದಿಂದ ಅನೇಕ ದೇಶಗಳು ಹಲವಾರು ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿದೆ ಎಂದು ಹೇಳಿದರು.
ಇನ್ನು ಡಬ್ಲ್ಯೂಹೆಚ್ಒ ಆದ್ಯತೆಗಳಿಗನುಗುಣವಾಗಿ ನ್ಯಾಯೋಚಿತವಾಗಿ ಕೋವಿಡ್-19 ಲಸಿಕಾ ಬೂಸ್ಟರ್ಗಳ ವಿತರಣೆಯನ್ನು ಬೆಂಬಲಿಸುತ್ತದೆ. ಡಬ್ಲ್ಯೂಹೆಚ್ಒ ಬೂಸ್ಟರ್ಗಳ ವಿರೋಧಿಯಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ನಾವು ಅಸಮಾನತೆಯ ವಿರೋಧಿಗಳು, ನಮ್ಮ ಮುಖ್ಯ ಕಾಳಜಿ ಪ್ರಪಂಚದಾದ್ಯಂತ ಜೀವಗಳನ್ನು ಉಳಿಸುವುದಾಗಿದೆ. ಹೆಚ್ಚು ಸುರಕ್ಷಿತ ರಾಷ್ಟ್ರಗಳನ್ನು ರಕ್ಷಿಸುವುದಕ್ಕಿಂತ ಕಡಿಮೆ ಸುರಕ್ಷಿತ ರಾಷ್ಟ್ರಗಳನ್ನು ರಕ್ಷಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!