Connect with us


      
ರಾಜಕೀಯ

ಕಾಂಗ್ರೆಸ್ ಚುನಾವಣಾ ಸಾರಥಿ ಯಾರು ?  ಸಿಂಹ  ಸವಾಲು

UNI Kannada

Published

on

ಮೈಸೂರು, ನ 14 (ಯುಎನ್ಐ) ಮಂಬರುವ  2023 ರ ವಿಧಾನಸಭೆ ಚುನಾವಣೆಯನ್ನು   ಬಿಜೆಪಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಿದೆ  ಆದರೆ ಕಾಂಗ್ರೆಸ್ ಪಕ್ಷ ಯಾರ ನಾಯಕತ್ವದಲ್ಲಿ, ಯಾರ ಸಾರಥ್ಯದಲ್ಲಿ ಚುನಾವಣೆ ಎದುರಿಸಲಿದೆ  ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ಸಂಸದ  ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಏನೇ ಅಪಪ್ರಚಾರ ಮಾಡಿದರೂ  ಮುಖ್ಯಮಂತ್ರಿ  ಬದಲಾಗುವುದಿಲ್ಲ ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಸ್ಪಷ್ಟಪಡಿಸಿದ್ದಾರೆ   ಎಂದು  ಹೇಳಿದರು.

ಕಾಂಗ್ರೆಸ್ ಪಕ್ಷ ಯಾರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವವೋ ಯಾರು  ಎಂಬುದನ್ನು  ಕಾಂಗ್ರೆಸ್ ನಾಯಕರು ಬಹಿರಂಗವಾಗಿ  ಸ್ಪಷ್ಟಪಡಿಸಲಿ ಎಂದರು.

ಬಿಟ್ ಕಾಯಿನ್ ಪ್ರಕರಣದಲ್ಲಿ  ಕಾಂಗ್ರೆಸ್ ನಾಯಕರು ಬಹಳ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಟ್ ಕಾಯಿನ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು  ಮೂದಲಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ  ಸ್ವಂತಿಕೆ ಇಲ್ಲ. ಮರಿ ಖರ್ಗೆ ಶೋಷಿತರ ಹೆಸರು ಹೇಳಿಕೊಂಡು ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು ಬರುತ್ತಿರುವುದು  ಭೂತದ ಭಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ  ಎಂದೂ  ಕಾಂಗ್ರೆಸ್ ನಾಯಕರ   ವಿರುದ್ದ  ಸಿಂಹ ವಾಗ್ದಾಳಿ ನಡೆಸಿದರು.

Share