Connect with us


      




ಆರೋಗ್ಯ

ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ ಟ್ಯಾಟೂ ನಿಷೇಧ – ಏಕೆ?

Iranna Anchatageri

Published

on

ಬ್ರುಸೆಲ್ಸ್, ಜನವರಿ 3 (ಯು.ಎನ್.ಐ.) ಪ್ರಪಂಚದಾದ್ಯಂತ ಅನೇಕ ಜನರು ಹಚ್ಚೆಗಳನ್ನು ಹಾಕಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಈ ಕ್ರೇಜ್ ಇನ್ಮುಂದೆ ಕಾಣಸಿಗದು. ಯೂರಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ ಜನವರಿ 4 ರಿಂದ, ಟ್ಯಾಟೂಗಳು ತಮ್ಮ ಹೊಳಪನ್ನು ಕಳೆದುಕೊಳ್ಳಲಿವೆ. ಏಕೆಂದರೆ 2020ರ ಜನವರಿಯಲ್ಲಿ, ಟ್ಯಾಟೂ ಬಣ್ಣದ ಶಾಯಿಯಲ್ಲಿ ಸಾಮಾನ್ಯವಾಗಿ ಬಳಸುವ ಸುಮಾರು 4,000 ರಾಸಾಯನಿಕಗಳನ್ನು ನೋಂದಣಿ, ಮೌಲ್ಯಮಾಪನ, ದೃಢೀಕರಣ ಮತ್ತು ರಾಸಾಯನಿಕಗಳ ನಿರ್ಬಂಧ (ರೀಚ್) ಯುರೋಪಿಯನ್ ಯೂನಿಯನ್ ನಿಷೇಧಿಸಿದೆ.

ಯೂರೋಪಿಯನ್ ಯುನಿಯನ್ ನ ರಾಸಾಯನಿಕ ನಿಯಂತ್ರಿಸುವ ಸಂಸ್ಥೆಯಾಗಿರುವ ರೀಚ್, ಈಗಾಗಲೇ ಬಳಸುತ್ತಿರುವ ಬಣ್ಣದ ಬದಲಾಗಿ ಇತರ ಆಯ್ಕೆಗಳನ್ನು ಅನ್ವೇಷಿಸುವಂತೆ ಇಂಕ್ ಪೂರೈಕೆದಾರರಿಗೆ ಜನವರಿ 4, 2021 ರವರೆಗೆ ಗಡುವು ನೀಡಿದೆ. EU ನಿರ್ಧಾರದಿಂದಾಗಿ  ಜನವರಿ 4 ರಿಂದ ಒಕ್ಕೂಟದ ರಾಷ್ಟ್ರಗಳು ಹಚ್ಚೆ ಹಾಕುವವರು ಬಣ್ಣದ ಶಾಯಿಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಸಂಸ್ಥೆಯ ಪ್ರಕಾರ, ಅಂತಹ ಕೆಲವು ರಾಸಾಯನಿಕಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಇದು ಚರ್ಮದ ಮೇಲಿನ ಭಾಗದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಆ ವ್ಯಕ್ತಿ ‘ಕ್ಯಾನ್ಸರ್ ಅಥವಾ ಜೆನೆಟಿಕ್ ರೂಪಾಂತರ’ ಅಪಾಯದಲ್ಲಿರುತ್ತಾರೆ ಎಂದು ಹೇಳಿದೆ.

ಟ್ಯಾಟೂಗಳನ್ನು ನಿಷೇಧಿಸುವುದು ಉದ್ದೇಶವಲ್ಲ

“ಟ್ಯಾಟೂಗಳನ್ನು ನಿಷೇಧಿಸುವುದು ಉದ್ದೇಶವಲ್ಲ.. ಆದರೆ ಟ್ಯಾಟೂಗಳಲ್ಲಿ ಬಳಸುವ ಬಣ್ಣಗಳು ಮತ್ತು ಮೇಕ್ಅಪ್ ಅನ್ನು ಸುರಕ್ಷಿತವಾಗಿಸುವುದು” ನಮ್ಮ ಉದ್ದೇಶವಾಗಿದೆ ಎಂದು ರೀಚ್ ಹೇಳಿದೆ. ಈ ನಿರ್ಧಾರದ ನಂತರ ಟ್ಯಾಟೂ ಬಳಕೆದಾರರು ಹಾಗೂ ಹಚ್ಚೆ ಹಾಕುವುದನ್ನು ವೃತ್ತಿ ಮಾಡಿಕೊಂಡಿರುವವರು ತುಂಬಾ ಅಸಮಾಧಾನಗೊಂಡಿದ್ದಾರೆ.

Continue Reading
Share