Published
5 months agoon
By
Vanitha Jainನವದೆಹಲಿ, ಡಿಸೆಂಬರ್ 8, (ಯು.ಎನ್.ಐ): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರಜಾಸತ್ತಾತ್ಮಕ ವಿರೋಧಿಯಾಗಿ ಕೃಷಿ ಕಾನೂನುಗಳನ್ನು ಜಾರಿಗೆ ತಂದ ರೀತಿಯಲ್ಲೇ ಆ ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.
ನವದೆಹಲಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರೈತ ವಿರೋಧಿ ಕೃಷಿ ಕಾನೂನುಗಳನ್ನು ಅಂಗೀಕರಿಸಿದ ರೀತಿಯಲ್ಲಿಯೇ ಯಾವುದೇ ಚರ್ಚೆಗಳಿಲ್ಲದೇ, ಯಾರೊಬ್ಬರ ಸಲಹೆ ಸೂಚನೆಗಳಿಲ್ಲದೇ ಪ್ರಜಾಸತ್ತಾತ್ಮಕ ವಿರೋಧಿಯಾಗಿಯೇ ನಡೆದುಕೊಂಡಿದೆ ಎಂದು ಹೇಳಿದರು.
ಕಳೆದ 13 ತಿಂಗಳಿನಿಂದ ಅನ್ನದಾತರು ಮತ್ತು ಸಂಘಟನೆಗಳು ಈ ವಿರೋಧಿ ಕಾನೂಗಳನ್ನು ತೊಲಗಿಸಲು ಪ್ರತಿಭಟನೆ ಕೈಗೊಂಡಿವೆ. ಇವರ ಈ ಪ್ರಯತ್ನಕ್ಕೆ ಕಾಂಗ್ರೆಸ್ ಕೂಡ ಸಾಥ್ ನೀಡಿದೆ. ಇದರ ಜೊತೆಗೆ ರೈತರ ದೃಢತೆ, ಒಗ್ಗಟ್ಟು, ಶಿಸ್ತು, ದುರಹಂಕಾರಿ ಸರ್ಕಾರವನ್ನು ನೆಲಕಚ್ಚುವಂತೆ ಮಾಡುವಲ್ಲಿನ ಅವರ ಸಮರ್ಪಣಾ ಭಾವಕ್ಕೆ ಮತ್ತು ಅವರ ಮಹಾನ್ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ರೈತರ ಪ್ರಯತ್ನವನ್ನು ಕೊಂಡಾಡಿದರು.
ಕಳೆದ 12 ತಿಂಗಳಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ಸ್ಮರಿಸೋಣ, ಗೌರವಿಸೋಣ. ಇದರ ಜೊತೆಗೆ ಕಾನೂನಾತ್ಮಕವಾದ ಎಸ್ಪಿ ಕಾಯ್ದೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ರೈತರ ಪರ ನಿಲ್ಲೋಣ ಎಂದು ಕರೆನೀಡಿದರು.
ಇನ್ನು ಮೋದಿ ಸರ್ಕಾರ ಯಾಕೆ ಸಂವೇದನಾಶೀಲ ರಹಿತವಾಗಿ ವರ್ತಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ ಮತ್ತು ಸಮಸ್ಯೆಯ ಗಂಭೀರತೆ ತಿಳಿಯುವಲ್ಲಿ ವಿಫಲವಾಗುತ್ತಿರುವುದರ ಬಗ್ಗೆ ಜನರಲ್ಲಿ ಗೊಂದಲ ಮೂಡುತ್ತಿದೆ ಎಂದು ಹೇಳಿದರು.
ಇನ್ನು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯನ್ನು ಕಡಿಮೆ ಮಾಡುವುದರ ಕುರಿತಾಗಿ ತೆಗೆದುಕೊಂಡಿರುವ ನಿಲುವು ಅಸಮರ್ಪಕವಾಗಿದೆ. ಸರ್ಕಾರು ಇ ಕುರಿತಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ರೀತಿಯ ಅಧಿಕಾರ, ಅವಕಾಶ ಇರುವುದರ ಹೊರತಾಗಿಯೂ ಸುಂಕ ಕಡಿತದ ಜವಾಬ್ದಾರಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಅಲ್ಲದೇ ಜನರಿಗೆ ಉಪಯೋಗಕ್ಕೆ ಬಾರದ ವ್ಯರ್ಥ ಯೋಜನೆಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಮೊದಲು ಪೆಟ್ರೋಲ್ ಬೆಲೆ ಕಡಿಮೆ ಮಾಡಿ ತೋರಿಸಲಿ: ಮಲ್ಲಿಕಾರ್ಜನ ಖರ್ಗೆ ಸವಾಲು
ಬಿಜೆಪಿ ಮುಖಂಡನ ಹತ್ಯೆ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ: ಬಿಎಸ್ ವೈ
ಬಿಜೆಪಿಯ ಇನ್ನು 4 ವಿಕೇಟ್ ಹೋಗುತ್ತೆ: ಪ್ರಿಯಾಂಕ ಖರ್ಗೆ ಭವಿಷ್ಯ
ದೇಣಿಗೆ ವಂಚನೆ ಪ್ರಕರಣ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರ ವಿರುದ್ಧ ಪ್ರಕರಣ ದಾಖಲು
ಬಿಜೆಪಿ ಪ್ರಜಾಪ್ರಭುತ್ವದ ಸರಣಿ ಹಂತಕ: ಅಖಿಲೇಶ್