Connect with us


      




ಸಾಮಾನ್ಯ

ಜನರು ಪರಿಸರ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದ್ದಾರೆ: ಸಚಿವ ವಿಶ್ವಾಸ್ ಸಾರಂಗ್ ಕಿಡಿ

Vanitha Jain

Published

on

ಭೋಪಾಲ್: ಮಾರ್ಚ್ 18 (ಯು.ಎನ್.ಐ.) ಹಬ್ಬದ ದಿನಗಳಲ್ಲಿ ಪರಿಸರ ಹಾಗೂ ಜಲಸಂರಕ್ಷಣೆ ಕುರಿತಾಗಿ ಬರುವ ಹೇಳಿಕೆಗಳ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಕಟುವಾಗಿ ಟೀಕಿಸಿದ್ದಾರೆ.

“ದೇಶದ ಯುವಕರನ್ನು ಓಡಿಸಲು ಕೆಲವರು ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಭೋಪಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಾಸ್ ಸಾರಂಗ್, ಹಿಂದೂ ಧರ್ಮದ ಹಬ್ಬಗಳಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರುವ ರೀತಿಯನ್ನು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಹೇಳಿದ ಅವರು, ಇಂತಹ ಸಂದೇಶಗಳನ್ನು ಹರಡುವ ಮೂಲಕ ನಮ್ಮ ಯುವಕರನ್ನು ಹಿಂದೂ ಹಬ್ಬಗಳಿಂದ ದೂರ ಓಡಿಸುವ ಸಂಚು ರೂಪಿಸಲಾಗುತ್ತಿದೆ ಎಂದರು.

ಹೋಳಿಯಲ್ಲಿ ನೀರು ಉಳಿಸಿ ಎಂಬ ಸಂದೇಶ ಮಾತ್ರ ಕೆಲಸ ಮಾಡುವುದಿಲ್ಲ, ಹೋಳಿಯಲ್ಲಿ ನೀರು ಉಳಿಸುವ ಬಗ್ಗೆ ಮಾತನಾಡುವ ಇವರು ತಮ್ಮ ಕಾರು ಹೊಳೆಯಲು ಎಷ್ಟು ನೀರನ್ನು ಪೋಲು ಮಾಡುತ್ತಾರೆ, ಅವರು ಮೊದಲು ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕು. ಹಬ್ಬಗಳ ಸಮಯದಲ್ಲಿ ಮಾತ್ರ ಈ ರೀತಿಯ ವಿಷಯ ಏಕೆ ಬರುತ್ತದೆ? ಈ ಜನರು ಪರಿಸರದ ಹೆಸರಿನಲ್ಲಿ ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

Share