Connect with us


      




ರಾಜಕೀಯ

ಬಲವಂತದ ಮತಾಂತರ ನಿಷೇಧ ಕಾಯಿದೆ ಅಂದರೆ ಕಾಂಗ್ರೆಸ್ ನಾಯಕರಿಗೆ ಭಯ ಏಕೆ?

UNI Kannada

Published

on

ನಾವು ಅಂದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಕಾನೂನು ಮಾಡದಿದ್ದರೆ ಹೇಗೆ?ನಮಗೆ ಬಹುಮತ ಇದೆ.ಹೀಗಾಗಿ ನಾವು ಮಂಡನೆ ಮಾಡಿಯೇ ತೀರುತ್ತೇವೆ

ಬೆಳಗಾವಿ: ಡಿಸೆಂಬರ್‌ 14 (ಯು.ಎನ್.ಐ) ಬಲವಂತದ ಮತಾಂತರ ನಿಷೇಧ ಕಾಯಿದೆ ಜಾರಿಯಾಗಲಿದೆ ಎಂದರೆ ಕಾಂಗ್ರೆಸ್ ನಾಯಕರಿಗೆ ಭಯ ಏಕೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ನಿಷೇಧ ಕಾಯಿದೆ ತರುತ್ತೇವೆ. ನಾವು ಅಂದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಕಾನೂನು ಮಾಡದಿದ್ದರೆ ಹೇಗೆ? ನಮಗೆ ಬಹುಮತ ಇದೆ.ಹೀಗಾಗಿ ನಾವು ಮಂಡನೆ ಮಾಡಿಯೇ ತೀರುತ್ತೇವೆ.ಅಷ್ಟಕ್ಕೂ ಈ ಕಾಯಿದೆ ಎಂದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ‌ಗೂ ಭಯ ಏಕೆ? ಎಂದು ಪ್ರಶ್ನಿಸಿದರು.

ಯಾವುದೋ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡುವ ಕಾಂಗ್ರೆಸ್ ನಾಯಕರು ಮಾತ್ರ ಇದನ್ನು ವಿರೋಧಿಸುವ ಹೇಳಿಕೆ ಕೊಡುತ್ತಿದ್ದಾರಷ್ಟೆ.ಡಿ.ಕೆ.ಶಿವಕುಮಾರ್ ನನ್ನ ಜತೆ ಬಂದರೆ ಬಲವಂತದ ಮತಾಂತರ ಮಾಡುತ್ತಿರುವುದದನ್ನು ತೋರಿಸುತ್ತೇನೆ. ಲವ್ ಜಿಹಾದ್ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾಗಿ ಬೀದಿಗೆ ಬಿಡುತ್ತಿದ್ದಾರೆ. ವಿದೇಶಗಳಿಗೆ ಮಾರುತ್ತಿದ್ದಾರೆ.ಹೀಗಾಗಿ ಇವಕ್ಕೆಲ್ಲ ಕಡಿವಾಣ ಹಾಕಲೆಂದೇ ಈ ಕಾನೂನು ತರುವುದರ ಬಗ್ಗೆ ನಾವು ಕಟಿಬದ್ಧ ಎಂದು ಹೇಳಿದರು.

ನಮ್ಮ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಬಂದಿರುವುದಕ್ಕೆ ಈ ಕಾನೂನು ಜಾರಿಗೆ ತರುತ್ತಿದ್ದೇವೆಂದು ಸಿದ್ದರಾಮಯ್ಯ ಹೇಳಿದ್ದಾರೆ.ಅಷ್ಟಕ್ಕೂ ಕಮಿಷನ್ ದಂಧೆ ಅವರ ಕಾಲದಲ್ಲಿ ಆಗಿತ್ತೋ ಈಗ ಆಗಿದಿಯೋ ಎನ್ನುವುದು ಗೊತ್ತಾಗುತ್ತದೆ.ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಿಎಂ ತನಿಖೆಗೆ ಕೊಡಲು ಸಿದ್ಧ ಎಂದಿದ್ದಾರೆ.ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಮತಗಳಿಗಾಗಿ ಸಿದ್ದರಾಮಯ್ಯ ಓಲೈಕೆ ಮಾತುಗಳನ್ನು ಆಡುತ್ತಿದ್ದಾರೆ.ನಮ್ಮ ಸರ್ಕಾರ ಈ ಬಿಲ್ ಮಂಡಿಸಲು ಸಿದ್ದವಾಗಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.



Share