Connect with us


      




ದೇಶ

ಓಮೈಕ್ರಾನ್‌ ಆತಂಕ: ಅಗತ್ಯವಾದರೆ ಕಠಿಣ ನಿರ್ಬಂಧ ವಿಧಿಸಲಾಗುವುದು ಎಂದ ಕೇಜ್ರಿವಾಲ್‌

Vidyashree S

Published

on

ಕೇಜ್ರಿವಾಲ್‌

ನವದೆಹಲಿ: ಕೋವಿಡ್‌ ರೂಪಾಂತರಿ ವೈರಸ್‌ ಓಮೈಕ್ರಾನ್‌ ಉಲ್ಬಣಗೊಂಡರೆ ಪರಿಸ್ಥಿತಿ ನಿಭಾಯಿಸಲು ಕೇಂದ್ರಾಡಳಿತ ಪ್ರದೇಶ ಸನ್ನದ್ಧವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಹೇಳಿದ್ದಾರೆ.

“ಕೋವಿಡ್‌ ಹೊಸ ತಳಿಯ ಹರಡುವಿಕೆಯನ್ನು ನಿಯಂತ್ರಿಸುವ ಅಗತ್ಯ ಎದುರಾದರೆ ನಿರ್ಬಂಧಗಳನ್ನು ವಿಧಿಸಲಾಗುವುದು. ಪ್ರಸ್ತುತ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿಲ್ಲ” ಎಂದಿದ್ದಾರೆ.

ಚಳಿಗಾಲದ ರಜೆ ಮುಗಿದ ನಂತರ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ. ದೆಹಲಿಯಲ್ಲಿ  ಈವರೆಗೆ ಎರಡು ಓಮೈಕ್ರಾನ್‌ ಪ್ರಕರಣ ವರದಿಯಾಗಿದೆ.

Continue Reading
Share