Connect with us


      




ಸಿನೆಮಾ

ಆಸ್ಕರ್ ವೇದಿಕೆಯಲ್ಲಿ ಕಪಾಳಮೋಕ್ಷ

Kumara Raitha

Published

on

ಲಾಸ್ ಏಂಜಲೀಸ್: ಮಾ.28 ( ಯು.ಎನ್.ಐ) ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ವಿಲ್ ಸ್ಮಿತ್ ಆಸ್ಕರ್ ವೇದಿಕೆಗೆ ನುಗ್ಗಿ ಹಾಸ್ಯನಟ, ಪ್ರಶಸ್ತಿ ಸಮಾರಂಭದ ನಿರೂಪಕ ಕ್ರಿಸ್ ರಾಕ್ ಅವರಿಗೆ ಕಪಾಳ ಮೋಕ್ಷ ಮಾಡಿದರು.

ವೇದಿಕೆಯಲ್ಲಿ ನಿಂತು ನಿರೂಪಣೆ ಮಾಡ್ತಿದ್ದ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಬಗ್ಗೆ ಮಾಡಿದ ತಮಾಷೆ ಮಾತಿಗೆ ಕೆರಳಿದ ವಿಲ್ ಸ್ಮಿತ್ ಎದ್ದು ಬಂದು ಪ್ರಶಸ್ತಿ ಪ್ರದಾನ ಸಮಾರಂಭ ವೇದಿಕೆ ಮೇಲೆ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದರು. ಒಂದು ಕ್ಷಣದಲ್ಲಿ ಈ ವಿಡಿಯೋ ವೈರಲ್ ಆಗಿ ಇದು ಪೂರ್ವ ನಿರ್ಧಾರಿತ ಸ್ಕ್ರಿಪ್ಟ್ ಅಥವಾ ನಿಜವೇ ಎಂದು ಪ್ರಶ್ನಿಸುವಂತೆ ಅಚ್ಚರಿಯಾಯ್ತು.

ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬೋಳು ತಲೆಯ ಬಗ್ಗೆ ತಮಾಷೆ ಮಾಡ್ತಿದ್ದಂತೆ ಎದ್ದು ಬಂದು ನಿರೂಪಕನ ಕೆನ್ನೆಗೆ ಬಾರಿಸಿದ ನಟ ವಿಲ್ ಸ್ಮಿತ್ “ನನ್ನ ಹೆಂಡತಿಯ ಹೆಸರನ್ನು ನಿನ್ನ ಕೊಳಕು ಬಾಯಿಯಿಂದ ಹೇಳಬೇಡ” ಎಂದು ಕೂಗಿದರು. ಬಳಿಕ ನಟ ವಿಲ್ ಸ್ಮಿತ್ ನಮ್ಮ ನಡೆ ಬಗ್ಗೆ ಕ್ಷಮೆ ಕೇಳಿ ಭಾವುಕರಾದ್ರು. ನಾನು ಆಯೋಜಕರ ಬಳಿ ಹಾಗು ನನ್ನನ್ನು ನಾಮಿನೇಟ್ ಮಾಡಿದವರ ಬಳಿ ಕ್ಷಮೆ ಕೇಳುತ್ತೇನೆಂದರು.

ನಟ ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಕಳೆದ ವರ್ಷದಿಂದ ಕೂದಲು ಉದುರುವ ಸಮಸ್ಯೆಯಿಂದ ಬಳಲುತಿದ್ದಾರೆ. ಅಲೋಪೆಸಿಯಾ ಎಂಬ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವುದನ್ನ ಖುದ್ದು ವುಲ್ ಸ್ಮಿತ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು

Share