Published
4 months agoon
By
Vanitha Jainಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ ಬ್ಲಾಕ್ನ ಕೆ ವಾಗೈಕುಲಂ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳದಾದ ಮಹಿಳೆಯೇ ಮೀನಾಕ್ಷಿ (೪೫). ಈಕೆಯ ಮಗ ಅದೇ ಗ್ರಾಮದ ಅನ್ಯ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣಕ್ಕೆ ತಾಯಿಯ ಮೇಲೆ ಹುಡುಗಿಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಮಹಿಳೆಯು ಅರುಪ್ಪುಕೊಟ್ಟೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮೀನಾಕ್ಷಿಯು ಪರಾಳಚಿ ಠಾಣೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದು, ಬಾಲಕಿಯ ತಾಯಿ ಸೇರಿದಂತೆ 14 ಮಂದಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಜನವರಿ 22 ರಂದು ಮೀನಾಕ್ಷಿ ಅವರ ಮಗ ಅದೇ ಗ್ರಾಮದ ಬೇರೆ ಜಾತಿಯ ಹುಡುಗಿಯೊಂದಿಗೆ ಓಡಿಹೋಗಿ ವಿವಾಹವಾದರು. ನಂತರ ಆಶ್ರಯ ಕೋರಿ ಅರುಪ್ಪುಕೊಟ್ಟೈ ಎಲ್ಲಾ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ಮೂರು ದಿನಗಳ ನಂತರ, ಜನವರಿ 25 ರಂದು, ಹುಡುಗಿಯ ಸಂಬಂಧಿಕರು ಮತ್ತು ಇತರರು ಮೀನಾಕ್ಷಿ ಅವರ ಮನೆಗೆ ನುಗ್ಗಿ ಅವಳನ್ನು ಹೊರಗೆಳೆದು, ದೀಪದ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು ಎಂದು ಹೇಳಿದರು.
“ನೆಹರೂ ಅವರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು”
ಯುಪಿ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು: ಧನಸಹಾಯ ಘೋಷಿಸಿದ ಮೋದಿ
ನಮಗೆ ಯಾವಾಗಲೂ ಜನರು ಮೊದಲು: ಪೆಟ್ರೋಲ್ ಬೆಲೆ ಇಳಿಸಿದ ಬಳಿಕ ಪ್ರಧಾನಿ ಮೋದಿ ಹೇಳಿಕೆ
ಜನಸಾಮಾನ್ಯರಿಗೆ ಗುಡ್ ನ್ಯೂಸ್; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
ಜ್ಞಾನವಾಪಿ ಮಸೀದಿಯ ಶಿವಲಿಂಗದ ಬಗ್ಗೆ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರಿಗೆ ಜಾಮೀನು ಮಂಜೂರು
ಅಕ್ರಮ ಫ್ಲಾಟ್ ನಿರ್ಮಾಣ: ನೋಟಿಸ್ ಜಾರಿ ಮಾಡಿದ ಬಿಎಂಸಿ